ಆ್ಯಪ್ನಗರ

ಮೃತ ರೈತನ ಕುಟುಂಬಕ್ಕೆ ಶೀಘ್ರ ಪರಿಹಾರ

ಖಾನಾಪುರ: ತಾಲೂಕಿನ ಕೌಂದಲ್‌ ಗ್ರಾಮದ ಹೊರವಲಯದಲ್ಲಿ ಬುಧವಾರ ಕರಡಿ ದಾಳಿಯಿಂದ ಮೃತಪಟ್ಟ ರೈತ ಗಣಪತಿ ಪಾಟೀಲ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಶೀಘ್ರದಲ್ಲಿ 5 ...

Vijaya Karnataka 8 Jun 2018, 5:00 am
ಖಾನಾಪುರ: ತಾಲೂಕಿನ ಕೌಂದಲ್‌ ಗ್ರಾಮದ ಹೊರವಲಯದಲ್ಲಿ ಬುಧವಾರ ಕರಡಿ ದಾಳಿಯಿಂದ ಮೃತಪಟ್ಟ ರೈತ ಗಣಪತಿ ಪಾಟೀಲ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಶೀಘ್ರದಲ್ಲಿ 5 ಲಕ್ಷ ರೂ. ಪರಿಹಾರ ದೊರಕಿಸಲಾಗುವುದು ಎಂದು ಎಸಿಎಫ್‌ ಸಿ.ಬಿ. ಪಾಟೀಲ ಹೇಳಿದರು.
Vijaya Karnataka Web quick relief for the deceased farmers family
ಮೃತ ರೈತನ ಕುಟುಂಬಕ್ಕೆ ಶೀಘ್ರ ಪರಿಹಾರ


ಕೌಂದಲ್‌ ಗ್ರಾಮದಲ್ಲಿ ಗುರುವಾರ ಗಣಪತಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಅವರು ಮಾತನಾಡಿದರು. ತಾಲೂಕಿನ ಅರಣ್ಯದಲ್ಲಿ ಕರಡಿಗಳ ಸಂಖ್ಯೆ ವೃದ್ಧಿಸಿದೆ. ಇಲ್ಲಿಯವರೆಗೆ ಗೋಲಿಹಳ್ಳಿ, ನಾಗರಗಾಳಿ, ಲೋಂಡಾ ಮತ್ತು ಕಣಕುಂಬಿ ವಲಯಗಳ ಅರಣ್ಯದಲ್ಲಿ ಕರಡಿಗಳ ಚಲನವಲನದ ಬಗ್ಗೆ ಇಲಾಖೆಗೆ ಮಾಹಿತಿ ಇತ್ತು. ಆದರೆ ಇದೇ ಮೊದಲ ಸಲ ಖಾನಾಪುರ ವಲಯದ ಕೌಂದಲ್‌ ಭಾಗದಲ್ಲಿ ಕರಡಿ ಕಾಣಿಸಿಕೊಂಡಿದೆ. ಕೌಂದಲ್‌, ಕರಂಬಳ, ಹೊಣಕಲ್‌, ನಾವಗಾ ಮತ್ತು ಗಂಗವಾಳಿ ಪ್ರದೇಶದಲ್ಲಿ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿ ಕರಡಿಯನ್ನು ಮರಳಿ ಅರಣ್ಯಕ್ಕೆ ಅಟ್ಟುವ ಕೆಲಸ ಮಾಡಲಿದ್ದಾರೆ. ಇದಕ್ಕೆ ಸ್ವಲ್ಪ ಸಮಯ ತಗುಲುವ ಕಾರಣ ಒಂದೆರಡು ದಿನಗಳ ಕಾಲ ಈ ಭಾಗದ ರೈತರು ಒಂಟಿಯಾಗಿ ಸಂಚರಿಸಬಾರದು ಎಂದು ಅವರು ಸಲಹೆ ನೀಡಿದರು.

ಅಂತ್ಯಕ್ರಿಯೆಯಲ್ಲಿ ಮಾಜಿ ಶಾಸಕ ಅರವಿಂದ ಪಾಟೀಲ, ತಹಸೀಲ್ದಾರ್‌ ದಿನಮಣಿ ಹೆಗಡೆ, ಆರ್‌ಎಫ್‌ಒ ಎಸ್‌.ಎಸ್‌. ನಿಂಗಾಣಿ, ಸಿಪಿಐ ಮೋತಿಲಾಲ ಪವಾರ, ಪಿಎಸ್‌ಐ ಸಂಗಮೇಶ ಹೊಸಮನಿ, ಕಾಂಗ್ರೆಸ್‌ ಮುಖಂಡ ಇರ್ಫಾನ್‌ ತಾಳಿಕೋಟಿ, ಉಪವಲಯ ಅರಣ್ಯಾಧಿಕಾರಿ ವಿನಾಯಕ ಪಾಟೀಲ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ