ಆ್ಯಪ್ನಗರ

ಕಬ್ಬು ಕಟಾವಿಗೂ ಕುತ್ತು ತಂದ ಮಳೆ

ರಾಜು ಉಸ್ತಾದ್‌ ಬೆಳಗಾವಿ ಅಕ್ಟೋಬರ್‌ ...

Vijaya Karnataka 31 Oct 2019, 5:00 am
ರಾಜು ಉಸ್ತಾದ್‌ ಬೆಳಗಾವಿ
Vijaya Karnataka Web 30RAJU-4063058

ಅಕ್ಟೋಬರ್‌ ತಿಂಗಳಲ್ಲಿಸುರಿದ ಮಳೆಯಿಂದ ಹೊಲ - ಗದ್ದೆಗಳಲ್ಲಿನೀರು ನಿಂತು ಮಣ್ಣು ಹಸಿಯಾಗಿರುವುದರಿಂದ ಕಬ್ಬು ಕಟಾವಿಗೆ ಅಡಚಣೆಯಾಗಿದ್ದು ಇದು ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕವಾಗಿ ಹಾನಿ ಮಾಡಲಿದೆ.

ಮಾಗಿದ ಕಬ್ಬು ಈಗ ಕಟಾವಿಗೆ ಸಿದ್ಧವಾಗಿ ನಿಂತಿದೆ. ಆದರೆ, ಬೆಳೆ ನೀರಿನ ಮಡುವಿನಲ್ಲಿಇರುವುದರಿಂದ ಕೂಲಿಕಾರರು ಗದ್ದೆಗಳಿಗೆ ಇಳಿಯಲು ನಿರಾಕರಿಸುತ್ತಿದ್ದಾರೆ. ಗದ್ದೆಗಳಲ್ಲಿಹುಳಹುಪ್ಪಡಿಗಳು ಇರುವ ಭೀತಿ ಹಾಗೂ ನೀರು ಮತ್ತು ಕೆಸರಿನ ಮಡುವಿನಲ್ಲಿಕಬ್ಬು ಕಟಾವು ಮಾಡಿ ಹೊತ್ತು ತರಲು ಆಗುವ ಪ್ರಯಾಸದ ಕಾರಣಕ್ಕೆ ಕಾರ್ಮಿಕರು ಹೀಗೆ ಹೇಳುತ್ತಿದ್ದಾರೆ.

ಗದ್ದೆಗಳಲ್ಲಿನ ನೀರು ಇಳಿದು ಕೆಸರು ಒಣಗಲು ಕನಿಷ್ಠ ಒಂದರಿಂದ ಒಂದೂವರೆ ತಿಂಗಳು ಬೇಕು. ಸಮೀಪದಲ್ಲಿಹಳ್ಳ, ನದಿ ಇದ್ದರೆ ನೀರನ್ನು ಅಲ್ಲಿಗೆ ಹರಿಸಿ ಹೊಲದ ಕಬ್ಬನ್ನು ಸಾಗಿಸಲು ಅನುಕೂಲ ಮಾಡಿಕೊಳ್ಳಬಹುದು. ಆದರೆ, ಇದು ಸಾಧ್ಯವಾಗದೇ ಇರುವವರು ನೀರು ಆವಿಯಾಗಿ, ಕೆಸರು ಒಣಗುವ ವರೆಗೂ ಕಾಯ್ದು ಕಟಾವು ಮಾಡುವ ಸ್ಥಿತಿ ನಿರ್ಮಾಣವಾಗಿದೆ.

''ಮಾಗಿದ ಕಬ್ಬು ಸಕಾಲದಲ್ಲಿಕಟಾವುಗೊಂಡು ಕಾರ್ಖಾನೆ ಸೇರಿದರೆ ತೂಕ ಮತ್ತು ಸಕ್ಕರೆ ಇಳುವರಿ ಎರಡೂ ಸರಿಯಾಗಿ ಸಿಗಲಿದೆ. ತಡವಾದರೆ ಕಬ್ಬು ಬೆಂಡು ಒಡೆದು ತೂಕ ಮತ್ತು ಸಕ್ಕರೆ ಇಳುವರಿ ಎರಡರಲ್ಲೂಇಳಿಕೆಯಾಗಲಿದೆ. ಇದರಿಂದ ರೈತರು ಮತ್ತು ಕಾರ್ಖಾನೆಗೆ ನಷ್ಟ. ಹೀಗಾಗಿ ಕಾರ್ಖಾನೆಗಳು ಮೊದಲು ಮಾಗಿದ ಕಬ್ಬನ್ನು ಸಾಗಿಸಲು ಒತ್ತು ಕೊಡಬೇಕು'' ಎಂದು ಕಬ್ಬು ಬೆಳೆಗಾರ ದಿಲೀಪ್‌ ಚೌವಾಣ ಒತ್ತಾಯಿಸಿದ್ದಾರೆ.

''ಕಬ್ಬು ಕಟಾವಿನ ದಿನಗಳಲ್ಲಿವ್ಯತ್ಯಾಸವಾದರೆ ಮುಂದಿನ ನಾಟಿ ಮೇಲೂ ಪರಿಣಾಮ ಬೀರಿ ಕಬ್ಬು ತಡವಾಗಿ ಮಾಗುತ್ತದೆ. ಇದು ಮುಂದಿನ ಹಂಗಾಮಿನ ಮೇಲೂ ಪರಿಣಾಮ ಬೀರುತ್ತದೆ. ಮುಂಬಯಿ ಕರ್ನಾಟಕ ಭಾಗದ ಕೆಲ ಕಾರ್ಖಾನೆಗಳು ಈಗಾಗಲೇ ಕಬ್ಬು ಅರೆಯಲು ಆರಂಭಿಸಿವೆ. ನೀರು ಮತ್ತು ಕೆಸರಿನಿಂದ ಹೊರಗಿರುವ ಗದ್ದೆಗಳ ಕಬ್ಬು ಕಟಾವು ಮಾಡಲಾಗುತ್ತಿದೆ. ಕಾರ್ಖಾನೆಗಳು ನೀರಿನಲ್ಲಿಇದ್ದರೂ ಮಾಗಿದ ಕಬ್ಬನ್ನೇ ಕಟಾವು ಮಾಡಬೇಕು'' ಎಂದು ರೈತ ಹೋರಾಟಗಾರ ಶಶಿಕಾಂತ ಜೋಶಿ ಆಗ್ರಹಿಸಿದ್ದಾರೆ.

ಕಬ್ಬು ಕಟಾವಿಗೆ ಇದು ಸೂಕ್ತ ಕಾಲ. ಈ ಸಂದರ್ಭದಲ್ಲಿಗದ್ದೆಗಳು ಒಣಗಿ, ಚಳಿ ಇದ್ದರೆ ಕಬ್ಬು ಕಟಾವು ಮತ್ತು ಸಾಗಣೆಗೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಈಗಲೂ ಮಳೆ ಸುರಿಯುತ್ತಿರುವುದು ಕಬ್ಬು ಬೆಳೆಗಾರರಿಗೆ ಸಂಕಷ್ಟ ತಂದಿದೆ.
- ಭುಜಂಗ ಕೇದಾರಿ, ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ