ಆ್ಯಪ್ನಗರ

ದಿನ ಪೂರ್ತಿ ಸುರಿದ ಮಳೆ

ಬೆಳಗಾವಿ/ಖಾನಾಪುರ ಜಿಲ್ಲೆಯಲ್ಲಿ ಕಳೆದೆರಡು ವಾರಗಳಿಂದ ಬಿಟ್ಟು ...

Vijaya Karnataka 26 Oct 2019, 5:00 am
ಬೆಳಗಾವಿ/ಖಾನಾಪುರ: ಜಿಲ್ಲೆಯಲ್ಲಿಕಳೆದೆರಡು ವಾರಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಶುಕ್ರವಾರ ದಿನವಿಡೀ ಹದವಾಗಿ ಸುರಿಯಿತು.
Vijaya Karnataka Web 25PRAMOD3072917


ಬೆಳಗ್ಗೆಯಿಂದಲೇ ಆರಂಭವಾದ ಮಳೆ ಸಂಜೆ ವರೆಗೆ ಸುರಿಯಿತು. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಖಾನಾಪುರ ಭಾಗದಲ್ಲಿಮಳೆ ತುಸು ಜೋರಾಗಿರುವುದರಿಂದ ಮಲಪ್ರಭಾ ನದಿಯಲ್ಲಿನೀರಿನ ಮಟ್ಟ ಹೆಚ್ಚಾಗಿದೆ. ಒಳಹರಿವಿನ ಪ್ರಮಾಣ ಐದು ಸಾವಿರ ಕ್ಯೂಸೆಕ್‌ ನಿಂದ ಎಂಟು ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ.

ಈ ನಡುವೆ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಶುಕ್ರವಾರ ಬೆಳಗ್ಗೆ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 41 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ದೂದಗಂಗಾ, ವೇದಗಂಗಾ ನದಿಯ 8448 ಕ್ಯೂಸೆಕ್‌ ನೀರು ಸೇರಿ ಕಲ್ಲೋಳ ಬ್ಯಾರೇಜ್‌ ಬಳಿ ಕೃಷ್ಣಾ ನದಿಗೆ 49 ಸಾವಿರ ಕ್ಯೂಸೆಕ್‌ ನೀರು ಹರಿದುಬರುತ್ತಿದೆ.

ವ್ಯಾಪಾರಕ್ಕೆ ಕಿರಿಕಿರಿ: ದೀಪಾವಳಿ ಹಿನ್ನೆಲೆಯಲ್ಲಿಕಳೆಕಟ್ಟಬೇಕಿದ್ದ ಮಾರುಕಟ್ಟೆ ಮಳೆಯಿಂದ ಕಳೆ ಕುಂದಿತ್ತು. ದಿನವಿಡೀ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ಗ್ರಾಹಕರು ಪರದಾಡಬೇಕಾಯಿತು. ಮಳೆ ಕಾಟದ ನಡುವೆಯೇ ಜನರು ವ್ಯಾಪಾರ ವಹಿವಾಟಿನಲ್ಲಿತೊಡಗಿದ್ದರು.

ಹೆದ್ದಾರಿ ಪಕ್ಕ ಭೂಕುಸಿತ:
ಖಾನಾಪುರ ತಾಲೂಕಿನ ಅರಣ್ಯ ಭಾಗದಲ್ಲಿಶುಕ್ರವಾರ ಇಡೀ ದಿನ ಮಳೆ ಸುರಿದ್ದು ಬೆಳಗಾವಿ - ಚೋರ್ಲಾ ಹೆದ್ದಾರಿಯ ಒಂದು ಬದಿಯಲ್ಲಿಭೂಕುಸಿತ ಉಂಟಾಗಿದೆ. ಅರಣ್ಯದ ನಡುವಿನ 25ಕ್ಕೂ ಹೆಚ್ಚು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ತಾಲೂಕಿನ ಅಮಟೆ-ಗೋಲ್ಯಾಳಿ ಗ್ರಾಮಗಳ ನಡುವಿನ ಮಲಪ್ರಭಾ ನದಿ ಸೇತುವೆ ಮೇಲೆ ಮತ್ತು ಚಿಕಲೆ-ಅಮಗಾಂವ, ತಿವೋಲಿ-ಶಿರೋಲಿ ಮಾರ್ಗಗಳ ಹಳ್ಳದ ನೀರು ನೀರು ಅಪಾಯದ ಮಟ್ಟದಲ್ಲಿಹರಿಯುತ್ತಿದೆ.

ಮಲಪ್ರಭಾ, ಮಹದಾಯಿ, ಪಾಂಡರಿ ನದಿ ಮತ್ತು ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಹಳ್ಳಗಳಲ್ಲಿನೀರಿನ ಹರಿವು ಹೆಚ್ಚಿದೆ. ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಶುಕ್ರವಾರ ಕಣಕುಂಬಿಯಲ್ಲಿ 8.4 ಸೆಂಮೀ ಮಳೆಯಾದ ವರದಿಯಾಗಿದೆ. ಶುಕ್ರವಾರ ಇಡೀ ದಿನ ಸುರಿದ ಮಳೆಯಿಂದ ಬೀಡಿ ಭಾಗದ ಭತ್ತದ ಗದ್ದೆಗಳಲ್ಲಿಭಾರೀ ನೀರು ಸಂಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ