ಆ್ಯಪ್ನಗರ

ಪರಿಹಾರ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿರುವ ಕೋಹಳ್ಳಿಯ ಅಕಾಲಿಕ ಮಳೆ ಸಂತ್ರಸ್ತರು

ಕೋಹಳ್ಳಿ: ಗ್ರಾಮ ಹಾಗೂ ಸುತ್ತಲಿನ ಪ್ರದೇಶದಲ್ಲಿಮೇ 10ರಂದು ಸುರಿದಿದ್ದ ಅಕಾಲಿಕ ...

Vijaya Karnataka 23 Oct 2020, 5:00 am
ಕೋಹಳ್ಳಿ: ಗ್ರಾಮ ಹಾಗೂ ಸುತ್ತಲಿನ ಪ್ರದೇಶದಲ್ಲಿಮೇ 10ರಂದು ಸುರಿದಿದ್ದ ಅಕಾಲಿಕ ಮಳೆಗೆ ಹಾನಿಗೀಡಾದವರಿಗೆ ಸರಕಾರದಿಂದ ಲಭಿಸಬೇಕಿದ್ದ ಪರಿಹಾರ ಇನ್ನೂ ದೊರೆತಿಲ್ಲ.
Vijaya Karnataka Web 22 KOHALLI 1071741
ಕೋಹಳ್ಳಿ ಗ್ರಾಮದಲ್ಲಿಮೇ 10 ರಂದು ಗಾಳಿ, ಮಳೆಯಿಂದಾದ ಹಾನಿ ಪರಿಶೀಲಿಸುತ್ತಿರುವ ತಾಪಂ ಇಒ ರವೀಂದ್ರ ಬಂಗಾರೆಪ್ಪನವರ. (ಸಂಗ್ರಹ ಚಿತ್ರ).


ಅಂದು ಭಾರೀ ಬಿರುಗಾಳಿ ಸಹಿತ ಮಳೆಗೆ ಗ್ರಾಮದ ಸಿದ್ರಾಯ ಸತ್ತಿ, ಮಲ್ಲಪ್ಪ ಡಂಬಳಿ, ಗುರಪ್ಪ ಹಾಲಳ್ಳಿ, ಸುಭಾನ ಮೆಂಡಿಗೇರಿ, ದುಂಡಪ್ಪ ಪುಂಡಿಪಲ್ಲೆ, ಬಾಬುಗೌಡ ಬಿರಾದಾರ, ಈರಪ್ಪ ಮಂಟೂರ ಎಂಬುವವರು ಸೇರಿದಂತೆ 28 ಕುಟುಂಬಗಳ ಗುಡಿಸಲುಗಳು ಧ್ವಂಸವಾಗಿದ್ದವು. ಗಾಳಿಗೆ 6 ತಿಂಗಳ ಮಗು ಮಲಗಿದ್ದ ತೊಟ್ಟಿಲ ಸಮೇತ ಮನೆಯೊಂದರ ಚಾವಣಿ ಹಾರಿಹೋಗಿತ್ತು. ಗುಡಿಸಲು, ಮನೆ ಕಳೆದುಕೊಂಡವರು ಅಹೋರಾತ್ರಿ ಮಳೆಯಲ್ಲೇ ಕಳೆದಿದ್ದರು.

ಇದೇ ವೇಳೆ ಆಲಿಕಲ್ಲುಸಹಿತ ಸುರಿದ ಮಳೆಯಿಂದ ದ್ರಾಕ್ಷಿ, ದಾಳಿಂಬೆ, ಗೋವಿನ ಜೋಳ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಅಪಾರ ಪ್ರಮಾಣದಲ್ಲಿಹಾನಿಗೀಡಾಗಿದ್ದವು. ಘಟನೆ ಸಂಭವಿಸಿದ ಮರುದಿನ ತಾಪಂ ಇಒ ರವಿ ಬಂಗಾರೆಪ್ಪನವರ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಒಂದೇ ಒಂದು ಪೈಸೆಯ ನೆರವು ಕೂಡ ಈ ಕುಟುಂಬಗಳಿಗೆ ಸಿಕ್ಕಿಲ್ಲ.

ಬದುಕು ದುರ್ಭರವಾಗಿರುವ ಈ ಜನ ಬ್ಯಾಂಕ್‌ಗಳಲ್ಲಿಸಾಲ ಪಡೆದು ಸ್ವಂತ ಖರ್ಚಿನಲ್ಲಿತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳ ಭರವಸೆಯಂತೆ ಸಿಗಬೇಕಿದ್ದ ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಇಂದು-ನಾಳೆಯೆಂಬ ಅಧಿಕಾರಿಗಳ ಭರವಸೆ ಮಧ್ಯೆ ಬದುಕಿನ ಬವಣೆ ಹೆಚ್ಚುತ್ತಲೇ ಸಾಗಿದೆ ಎನ್ನುತ್ತಾರೆ ಸಂತ್ರಸ್ತರಾದ ದುಂಡಪ್ಪ ಪುಂಡಿಪಲ್ಲೆಹಾಗೂ ಸಿದರಾಯ ಸತ್ತಿ.

ಮೇ ತಿಂಗಳಲ್ಲಿಹಾನಿಯಾದ ಮನೆಗಳು ಹಾಗೂ ಕಳೆದ ವಾರದಲ್ಲಿಮಳೆಯಿಂದ ಹಾನಿಯಾದ ಮನೆಗಳ ಬಗ್ಗೆ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ನೀಡಲಾಗಿದೆ. ಶೀಘ್ರದಲ್ಲಿಪರಿಹಾರ ಬರಲಿದೆ.
- ಈರಪ್ಪ ತಮದಡ್ಡಿ, ಪಿಡಿಒ, ಕೋಹಳ್ಳಿ.

ಮನೆಗಳನ್ನು ಕಳೆದುಕೊಂಡು ಆರು ತಿಂಗಳು ಕಳೆದರೂ ಒಂದು ರೂ. ಪರಿಹಾರ ಕೊಟ್ಟಿಲ್ಲ. ಈ ಸಂತ್ರಸ್ತರು ಬದುಕುವುದು ಕಷ್ಟವಾಗಿದೆ. ಸರಕಾರ ಕೂಡಲೇ ಪರಿಹಾರ ನೀಡಬೇಕು.
- ಸದಾಶಿವ ಹರಪಾಳೆ, ತಾಪಂ ಸದಸ್ಯರು, ಕೋಹಳ್ಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ