ಆ್ಯಪ್ನಗರ

ಭಾರಿ ಮಳೆಗಾಳಿಗೆ ಮನೆ ಚಾವಣಿ ಹಾರಿ ಭಾರೀ ಹಾನಿ

ವಿಕ ಸುದ್ದಿಲೋಕ ಪಾಲಬಾವಿ ಗ್ರಾಮದಲ್ಲಿ ಬುಧವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಗಿಡಮರಗಳ ನೆಲಕ್ಕುರುಳಿ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ...

Vijaya Karnataka 20 Apr 2018, 5:00 am

ಪಾಲಬಾವಿ: ಗ್ರಾಮದಲ್ಲಿ ಬುಧವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಗಿಡಮರಗಳ ನೆಲಕ್ಕುರುಳಿ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ.

ಸುಶೀಲಾ ಮಹಾದೇವ ಕರೋಸಿಯವರಿಗೆ ಸೇರಿದ ಬಸವ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆ ಕಟ್ಟಡದ ಚಾವಣಿ ಪತ್ರಾಸ್‌ ಬಿರುಗಾಳಿಗೆ ಹಾರಿ ಹೋಗಿ ಅಂದಾಜು 70ಸಾವಿರ ರೂ. ಹಾನಿಯಾಗಿದೆ.

ವಾಸ್ತುಶಾಂತಿ ಮಾಡಿ ಗೃಹ ಪ್ರವೇಶ ಮಾಡಬೇಕು ಎನ್ನುವಷ್ಟರಲ್ಲಿ ಸಂಭವಿಸಿದ ಈ ಘಟನೆಯಿಂದ ಮಹಾದೇವ ಕರೋಸಿ ಕುಟುಂಬ ಕಂಗಾಲಾಗಿದೆ. ವಿಷಯ ತಿಳಿದಿದ್ದರೂ ಗ್ರಾಪಂ ಸದಸ್ಯರಾಗಲಿ, ಗ್ರಾಮ ಲೆಕ್ಕಾಧಿಕಾರಿಯಾಗಲಿ ಬಂದು ನೋಡಿಲ್ಲವೆಂದು ಮಹಾದೇವ ಕರೋಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ