ಆ್ಯಪ್ನಗರ

ರಾಮದುರ್ಗ ಪುರಸಭೆ ಅಧಿಕಾರಿಗಳಿಂದ ಅಂಗಡಿಗಳ ಮೇಲೆ ದಾಳಿ

ರಾಮದುರ್ಗ: ಸ್ಥಳೀಯ ಪುರಸಭೆ ಅಧಿಕಾರಿಗಳ ತಂಡ ಪಟ್ಟಣದಲ್ಲಿರುವ ಅಂಗಡಿಗಳಿಗೆ ಹಠಾತ್‌ ದಾಳಿ ನಡೆಸಿ 200 ಕೆಜಿ ನಿಷೇದಿತ ಪ್ಲಾಸ್ಟಿಕ್‌ ದಾಸ್ತಾನನ್ನು ...

Vijaya Karnataka 29 Jun 2019, 5:00 am
ರಾಮದುರ್ಗ : ಸ್ಥಳೀಯ ಪುರಸಭೆ ಅಧಿಕಾರಿಗಳ ತಂಡ ಪಟ್ಟಣದಲ್ಲಿರುವ ಅಂಗಡಿಗಳಿಗೆ ಹಠಾತ್‌ ದಾಳಿ ನಡೆಸಿ 200 ಕೆಜಿ ನಿಷೇದಿತ ಪ್ಲಾಸ್ಟಿಕ್‌ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web BEL-28RD1


ಈಗಾಗಲೇ ಪುರಸಭೆಯಿಂದ ಎಲ್ಲ ಅಂಗಡಿ ಮಾಲೀಕರಿಗೆ ನಿಷೇಧಿತ ಪ್ಲಾಸ್ಟಿಕ್‌ ಬಳಸದಂತೆ ನೋಟಿಸ್‌ ನೀಡಿದ್ದರೂ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿರಲಿಲ್ಲ. ದಾಳಿ ನಡೆಸಿ ಪ್ಲಾಸ್ಟಿಕ್‌ ವಶಪಡಿಸಿಕೊಂಡು ದಂಡ ವಿಧಿಸಲು ಮುಂದಾದಾಗ ಅಂಗಡಿಕಾರರು ''ಇನ್ನು ಮುಂದೆ ಪ್ಲಾಸ್ಟಿಕ್‌ ಬಳಸುವುದಿಲ್ಲ. ಒಂದು ಅವಕಾಶ ನೀಡಿ'' ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ''ಇನ್ನು ಯಾವಾಗಬೇಕಾದರೂ ದಾಳಿ ಮಾಡಬಹುದು. ಒಂದು ವೇಳೆ ನಿಷೇಧಿತ ಪ್ಲಾಸ್ಟಿಕ್‌ ಸಿಕ್ಕರೆ ದಂಡ ವಿಧಿಸುವ ಜತೆಗೆ ಕ್ರಮಿನಲ್‌ ಪ್ರಕರಣ ದಾಖಲಿಸಲಾಗುವುದು'' ಎಂದು ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರಲ್ಲದೆ ಸಾರ್ವಜನಿಕರು ಪ್ಲಾಸ್ಟಿಕ್‌ ಬಳಸುವುದನ್ನು ನಿಲ್ಲಿಸಬೇಕೆಂದು ಸ್ಥಳದಲ್ಲೇ ಜಾಗೃತಿ ಮೂಡಿಸಿದರು.

ಪುರಸಭೆಯ ಆರೋಗ್ಯ ನಿರೀಕ್ಷ ಕ ಚಂದನಗೌಡ ಪಾಟೀಲ, ಅಕ್ಷ ತಾ ಕಮ್ಮಾರ, ಗೀತಾ ಬೆಳಗಲಿ, ಮೇಘರಾಜ ಭಂಗಿ, ಕುಮಾರ ನಸಬಿ, ಮಂಜುನಾಥ ಮಾದರ, ಸುಭಾಸ ಭಜಂತ್ರಿ ಹಾಗೂ ಗಿರಿಯಪ್ಪ ಕೈನಕಟ್ಟಿ ದಾಳಿ ನಡೆಸಿದ ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ