ಆ್ಯಪ್ನಗರ

ನೆರೆ ನಷ್ಟಕ್ಕೆ ಮತ್ತೊಂದು ಬಲಿ, ಕುಸಿದು ಬಿದ್ದ ಮನೆಯಲ್ಲೇ ನೇಣು ಬಿಗಿದುಕೊಂಡ ನೇಕಾರ

ನೇಕಾರರಾಗಿರುವ ರಮೇಶ್‌ ಅವರ 3 ಮಗ್ಗಗಳು ಆಗಸ್ಟ್‌ನಲ್ಲಿ ಬಂದ ಮಲಪ್ರಭಾ ನದಿ ಪ್ರವಾಹಕ್ಕೆ ನೀರಿನಲ್ಲಿ ಮುಳುಗಿ ಸಂಪೂರ್ಣ ಹಾಳಾಗಿದ್ದವು. ಅಲ್ಲದೆ ಮನೆ ಕೂಡಾ ಕುಸಿದಿತ್ತು. ಇರಲೊಂದು ಮನೆ ಇಲ್ಲದೆ ಪಕ್ಕದ ಇದ್ದೂರಿನಲ್ಲಿರುವ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ ವಾಸವಾಗಿದ್ದರು.

Vijaya Karnataka Web 15 Sep 2019, 2:29 pm
ಬೆಳಗಾವಿ: ಪ್ರವಾಹ, ಭೂ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿ, ಪರಿಹಾರವೂ ಸಿಗದೆ ಕಂಗಾಲಾಗಿರುವ ಜನರು ಆತ್ಮಹತ್ಯೆಯ ದಾರಿ ತುಳಿಯುತ್ತಿರುವ ಸುದ್ದಿ ಮೇಲಿಂದ ಮೇಲೆ ವರದಿಯಾಗುತ್ತಿದೆ. ಈ ಸಾಲಿಗೆ ಇದೀಗ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ರಮೇಶ ನೀಲಕಂಠಪ್ಪ ಹವಳಕೋಡ (42) ಸೇರ್ಪಡೆಯಾಗಿದ್ದಾರೆ.
Vijaya Karnataka Web Ramesh Neelakantappa


ಮಲಪ್ರಭಾ ನದಿ ಪ್ರವಾಹದ ನೀರು ರಮೇಶ್‌ ಮನೆಗೆ ನುಗ್ಗಿ ಅಪಾರ ನಷ್ಟವಾಗಿತ್ತು. ಇದ್ದ ಒಂದು ಮನೆಯೂ ಕುಸಿದು ಬಿದ್ದಿತ್ತು. ಇದರಿಂದ ಮನನೊಂದು ನೆರೆಗೆ ಕುಸಿದು ಬಿದ್ದಿರುವ ಮನೆಯಲ್ಲೇ ನೇಣು ಬಿಗಿದುಕೊಂಡು ರಮೇಶ್‌ ಭಾನುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಳೆಯೂ ಇಲ್ಲ ಪರಿಹಾರವೂ ಇಲ್ಲ; ಸಾಲ ಕಟ್ಟದ ನೆರೆ ಸಂತ್ರಸ್ತ ರೈತರಿಗೀಗ ಬಂಧನದ ವಾರಂಟ್‌

ನೇಕಾರರಾಗಿರುವ ರಮೇಶ್‌ ಅವರ 3 ಮಗ್ಗಗಳು ಆಗಸ್ಟ್‌ನಲ್ಲಿ ಬಂದ ಮಲಪ್ರಭಾ ನದಿ ಪ್ರವಾಹಕ್ಕೆ ನೀರಿನಲ್ಲಿ ಮುಳುಗಿ ಸಂಪೂರ್ಣ ಹಾಳಾಗಿದ್ದವು. ಅಲ್ಲದೆ ಮನೆ ಕೂಡಾ ಕುಸಿದಿತ್ತು. ಇರಲೊಂದು ಮನೆ ಇಲ್ಲದೆ ಪಕ್ಕದ ಇದ್ದೂರಿನಲ್ಲಿರುವ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ ವಾಸವಾಗಿದ್ದರು. ಮಗ್ಗಗಳು ನೀರಿಗೆ ಆಹುತಿ ಆಗಿದ್ದರಿಂದ ಮನನೊಂದ ರಮೇಶ್‌ ಮುರಿದು ಬಿದ್ದ ಮನೆಯಲ್ಲೇ ನೇಣು ಹಾಕಿಕೊಂಡು ಆಹ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ನೆರೆ ಸಂತ್ರಸ್ತ ರೈತ

ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಮಗನ ಸಾವಿನಿಂದ ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ಮೃತರಿಗೆ ತಂದೆ, ಹೆಂಡತಿ ಹಾಗೂ ಓರ್ವ ಪುತ್ರಿ ಇದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ