ಆ್ಯಪ್ನಗರ

ರಮೇಶ್‌ ಅನರ್ಹ ಮಾತ್ರವಲ್ಲ, ಅಯೋಗ್ಯರೂ ಹೌದು

ಗೋಕಾಕ: ''ಉಡಾಫೆಯಿಂದ ಪಕ್ಷ ತೊರೆದು ಅನರ್ಹ ಶಾಸಕರಾದ ...

Vijaya Karnataka 29 Nov 2019, 5:00 am
ಗೋಕಾಕ: ''ಉಡಾಫೆಯಿಂದ ಪಕ್ಷ ತೊರೆದು ಅನರ್ಹ ಶಾಸಕರಾದ ರಮೇಶ್‌ ಜಾರಕಿಹೊಳಿ ಅಯೋಗ್ಯರೂ ಹೌದು'' ಎಂದು ಮಾಜಿ ಸ್ಪೀಕರ್‌ ರಮೇಶಕುಮಾರ್‌ ಆರೋಪಿಸಿದರು.
Vijaya Karnataka Web ramesh is not only uneligible but also unworthy
ರಮೇಶ್‌ ಅನರ್ಹ ಮಾತ್ರವಲ್ಲ, ಅಯೋಗ್ಯರೂ ಹೌದು


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''2023ರವರೆಗೆ ರಮೇಶ ಜಾರಕಿಹೊಳಿ ಸೇರಿದಂತೆ ಇತರರನ್ನು ಅನರ್ಹರಾಗಿ ಮಾಡಿದ್ದೆ. ಕೋರ್ಟ್‌ ಅವರಿಗೆ ಚುನಾವಣೆಯಲ್ಲಿಸ್ಪರ್ಧಿಸಲು ಅವಕಾಶ ಕೊಟ್ಟಿದೆ. ಹೀಗಾಗಿ ಈಗ ಅವರ ಅರ್ಹತೆ- ಅನರ್ಹತೆಯನ್ನು ಕ್ಷೇತ್ರದ ಜನರೇ ತೀರ್ಮಾನ ಮಾಡಲಿದ್ದಾರೆ'' ಎಂದರು.

''ಅನರ್ಹತೆ ಅವಧಿ ನನ್ನ ಪ್ರಕಾರ 2023ರ ವರೆಗೆ ಇದೆ. ಸಂವಿಧಾನದ ಮಾಡೋವಾಗ ಇಂಥ ದುಷ್ಟರು ಇರುತ್ತಾರೆ ಎಂಬುದು ಗೊತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ ತೀರ್ಪುನ್ನು ನಾನು ಒಪ್ಪಿಕೊಳ್ಳುತ್ತೇನೆ. ಪಕ್ಷಾಂತರ ಕಾಯ್ದೆಯಲ್ಲಿಸಾಕಷ್ಟು ಲೋಪಗಳಿವೆ. ಪ್ರಜಾಪ್ರಭುತ್ವದ ಗೆಲುವಿನಿಂದ ರಾಜಕೀಯದ ವ್ಯಾಪಾರಿಕಣ ನಿಲ್ಲಲಿದೆ'' ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ಸತೀಶ ಜಾರಕಿಹೊಳಿ,ಅಜಯಕುಮಾರ ಸರನಾಯಕ, ನಜೀರ್‌ ಅಹಮದ್‌, ವಿನಯ ನಾವಲಗಟ್ಟಿ ಇತರರು ಇದ್ದರು.

ಅನರ್ಹರು ಗೆದ್ದರೆ ಸಂವಿಧಾನಕ್ಕೆ ಹಿನ್ನಡೆ:
''ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಸಂವಿಧಾನದ ಆಶಯಕ್ಕೆ ಪೂರಕವಾಗಿ ನಡೆಸುತ್ತೇನೆ ಎಂದು ಹೇಳಿದ ಬಿ.ಎಸ್‌.ಯಡಿಯೂರಪ್ಪ ಅವರೇ ಇಂದು ಅನರ್ಹರನ್ನು ಗೆಲ್ಲಿಸಿ ಕಳುಹಿಸಿ ಎಂದು ಹೇಳುತ್ತಿದ್ದಾರೆ. ಸಂವಿಧಾನದ ಅರಿವೇ ಇಲ್ಲದೆ ಅವರು ಅನರ್ಹರನ್ನು ಗೆಲ್ಲಿಸಿ ಎಂದು ಹೇಳುತ್ತಿದ್ದಾರೆ. ಇಂದು ಯಡಿಯೂರಪ್ಪ ಅವರು ಪ್ರಜಾಪ್ರಭುತ್ವಕ್ಕೆ ಮಾಡಿದ ದೊಡ್ಡ ಅಪಮಾನ. ಅನರ್ಹರು ಗೆದ್ದರೆ ಸಂವಿಧಾನಕ್ಕೆ ಹಿನ್ನಡೆಯಾಗಲಿದೆ '' ಎಂದು ರಮೇಶ್‌ಕುಮಾರ್‌ ಹೇಳಿದರು.

ನಾನು ಕಾಗವಾಡಕ್ಕೆ ಹೋದಾಗ ಶ್ರೀಮಂತ ಪಾಟೀಲರಿಗೆ ಪುನಃ ಹಾರ್ಟ್‌ ಅಟ್ಯಾಕ್‌ ಆಗಿರಬೇಕು. ರಮೇಶ ಜಾರಕಿಹೊಳಿ ನನ್ನ ಸ್ನೇಹಿತ. ಮಣ್ಣು ತಿನ್ನೋದು ಬೇಡ ಎಂದು ಅವರಿಗೆ ಹೇಳುತ್ತಿದ್ದೆ. ಆದರೆ, ರಮೇಶ್‌ ಹಲ್ಕಾ ಕೆಲಸ ಮಾಡಿದ್ದಾರೆ.
- ರಮೇಶ್‌ಕುಮಾರ್‌, ಮಾಜಿ ಸ್ಪೀಕರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ