ಆ್ಯಪ್ನಗರ

ಮಳೆ ಹಾನಿಗೆ ಶೀಘ್ರ ಪರಿಹಾರ ವ್ಯವಸ್ಥೆ

ಹುಕ್ಕೇರಿ: ಕಳೆದ ವಾರ ಸುರಿದ ಧಾರಕಾರ ಸುರಿದ ಮಳೆಯಿಂದ ಕಮ್ಮಾರ ಓಣಿ, ಬಾಂಬೆ ಚಾಳ್‌ ಮುಂತಾದೆಡೆ ಮನೆ ಕುಸಿತ ಹಾಗೂ ಅಂಗಡಿ, ...

Vijaya Karnataka 13 Jun 2018, 5:00 am
ಹುಕ್ಕೇರಿ: ಕಳೆದ ವಾರ ಸುರಿದ ಧಾರಕಾರ ಸುರಿದ ಮಳೆಯಿಂದ ಕಮ್ಮಾರ ಓಣಿ, ಬಾಂಬೆ ಚಾಳ್‌ ಮುಂತಾದೆಡೆ ಮನೆ ಕುಸಿತ ಹಾಗೂ ಅಂಗಡಿ, ಮನೆಗಳಲ್ಲಿ ನೀರು ನುಗ್ಗಿ ಆದ ಹಾನಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
Vijaya Karnataka Web BEL-12 HUKKERI 01 -UMESH KATTI


ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಈಗಾಗಲೇ ಸ್ಥಳಕ್ಕೆ ಉಪವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನರ ಭೇಟಿ ನೀಡಿದ್ದು ಅವರ ಮಾರ್ಗದರ್ಶನಲ್ಲಿ ತಹಸೀಲ್ದಾರರು ಮನೆ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಒಟ್ಟು 1.40 ಕೋಟಿ ನಷ್ಟವಾಗಿದ್ದಾಗಿ ತಿಳಿಸಿದ್ದಾರೆ. ಇದನ್ನು ಸಂತ್ರಸ್ಥರಿಗೆ ಅನುಕೂಲವಾಗುವ ಹಾಗೆ ವಿತರಿಸಲಾಗುವುದು ಎಂದು ಹೇಳಿದರು.

ಕಳೆದ ಹಲವು ವರ್ಷಗಳ ಹಿಂದೆ ರೀತಿ ಮಳೆ ನೀರು ನುಗ್ಗಿ ಮನೆಗಳು ಹಾನಿಗೀಡಾಗಿದ್ದವು. ಇದನ್ನು ಮನಗಂಡು ಹುಕ್ಕೇರಿ ಹಾಗೂ ಸಂಕೇಶ್ವರ ಸ್ಲಂ ನಿವಾಸಿಗಳಿಗೆ, ಹಾಗೂ ವಸತಿಹೀನರಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹುಕ್ಕೇರಿ ಪಟ್ಟಣದ ಹೊರವಲಯದ ಕ್ಯಾರಗುಡ್ಡದ ಬಳಿ 22 ಎಕರೆ ಹಾಗೂ ಸಂಕೇಶ್ವರ ಪಟ್ಟಣದಲ್ಲಿ 32 ಎಕರೆ ಭೂಮಿ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಆದರೂ ತಾಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ನಿರ್ಲಕ್ಷ್ಯದಿಂದ ಇನ್ನೂ ಮಂಜೂರಾತಿ ದೊರೆತಿಲ್ಲ. ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಾಲೂಕಿನ ಎರಡು ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕೀಳಿಸಲಾಗುವುದು, ಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುರಸಭೆ ಚುನಾವಣೆಗೆ ಬಿಜೆಪಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಪಕ್ಷ ದ ಗೆಲುವಿಗೆ ಕಾರ್ಯತಂತ್ರ ರೂಪಿಸಲಾಗಿದೆ. ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಜತೆಗೆ ಯುವಕರು, ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಚಿಂತನೆಯಿದೆ. ಒಟ್ಟಿನಲ್ಲಿ ಎರಡು ಪುರಸಭೆಯಲ್ಲಿ ಬಿಜೆಪಿ ಗೆಲ್ಲಿಸುವುದೇ ತಮ್ಮ ಗುರಿ ಎಂದರು.

ಈ ವರ್ಷ ತಾಲೂಕು ಹಾಗೂ ಗ್ರಾಮಗಳಲ್ಲಿ ಸಂಪೂರ್ಣ ಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಹುಕ್ಕೇರಿ ಸಂಕೇಶ್ವರ ಕೃಷಿ ಕೇಂದ್ರಗಳು ಸೇರಿದಂತೆ ತಾಲೂಕಿನ 13 ಕೇಂದ್ರಗಳಲ್ಲಿ ವಿತರಿಸಲಾಗುವುದು ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ