ಆ್ಯಪ್ನಗರ

ರಾಯಣ್ಣ ಸೊಸೈಟಿ ವಂಚನೆ ಪ್ರಕರಣ ಸಿಐಡಿಗೆ

ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪೊಲೀಸ್‌ ಆಯುಕ್ತ ಡಾ ಡಿಸಿ...

Vijaya Karnataka 21 Jun 2018, 5:00 am
ಬೆಳಗಾವಿ: ಬಹುಕೋಟಿ ಠೇವಣಿ ವಂಚನೆ ಆರೋಪ ಎದುರಿಸುತ್ತಿರುವ ಸಂಗೊಳ್ಳಿ ರಾಯಣ್ಣ ಕೋ ಆಪ್‌ ಸೊಸೈಟಿ ಪ್ರಕರಣವನ್ನು ಸಿಐಡಿಗೆ ವಹಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಡಾ.ಡಿ.ಸಿ. ರಾಜಪ್ಪ ಹೇಳಿದರು.
Vijaya Karnataka Web BLG-2006-2-52-20MAHESH5


ನಗರ ಪೊಲೀಸ್‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 'ಕಮಿಶನರ್‌ ಡೇ' ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ವಂಚನೆಗೆ ಒಳಗಾದ ಠೇವಣಿದಾರರೊಂದಿಗೆ ಅವರು ಮಾತನಾಡಿದರು. ಸಂಗೊಳ್ಳಿ ರಾಯಣ್ಣ ಸೊಸೈಟಿ ವಿರುದ್ಧ ಬಹುಕೋಟಿ ವಂಚನೆ ಪ್ರಕರಣ ದಾಖಲಾಗಿರುವುದರಿಂದ ಸಿಒಡಿಗೆ ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಿಐಡಿಗೆ ವಹಿಸುವ ಕುರಿತು ಈಗಾಗಲೇ ಸರಕಾರಕ್ಕೂ ಪತ್ರ ಬರೆಯಲಾಗಿದೆ. ಜು.15ರೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದರು.

''ಕಷ್ಟದ ದಿನಗಳಲ್ಲೂ ಬೆವರು ಹರಿಸಿ ಕೂಡಿಟ್ಟ ಹಣ ಕೈ ಬಿಟ್ಟು ಹೋಗಿರುವುದು ನೋವು ತಂದಿದೆ. ಮದುವೆ ಮಾಡಲೂ ಹಣವಿಲ್ಲವಾಗಿದೆ. ಕುಟುಂಬ ನಿರ್ವಹಣೆಯೇ ಕಷ್ಟವಾಗುತ್ತಿದೆ. ಆದಷ್ಟು ಬೇಗ ಠೇವಣಿ ಮರುಪಾವತಿಗೆ ಕ್ರಮ ಕೈಗೊಳ್ಳಿ'' ಎಂದು ಸೊಸೈಟಿ ಠೇವಣಿದಾರರು ಮನವಿ ಮಾಡಿದರು.

ಸಂಚಾರ ಸಮಸ್ಯೆ: ''ಟಿಳಕವಾಡಿ ಪ್ರದೇಶದ ರಸ್ತೆಗಳಲ್ಲಿ ತರಕಾರಿ ಮಾರಾಟಗಾರರಿಂದ ಸಂಚಾರ ಸಮಸ್ಯೆ ಎದುರಿಸಲಾಗುತ್ತಿದೆ. ರಸ್ತೆಯ ಬಹುತೇಕ ಭಾಗ ವ್ಯಾಪಾರಿಗಳೇ ಆಕ್ರಮಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದ ನಿತ್ಯ ಟ್ರಾಫಿಕ್‌ ಸಮಸ್ಯೆ ಎದುರಿಸುವಂತಾಗಿದೆ. ಪೊಲೀಸರು ಇದ್ದರೂ ಪ್ರಯೋಜನಕ್ಕೆ ಬಾರದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ರಸ್ತೆ ಬದಿ ವ್ಯಾಪಾರಕ್ಕಾಗಿ ಪಾಲಿಕೆಗೆ ಕರ ಪಾವತಿಸುತ್ತಿರುವುದರಿಂದ ಬೇರೆ ಕಡೆಗೆ ಸ್ಥಳಾಂತರಗೊಳ್ಳುವುದಿಲ್ಲ ಎನ್ನುವ ವ್ಯಾಪಾರಿಗಳಿಗೆ ತಕ್ಕ ಪಾಠ ಕಲಿಸಿ'' ಎಂದು ಮಾಸ್ಟರ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಪ್ರತಿನಿಧಿಗಳು ದೂರಿದರು. ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುವುದು ಕಾನೂನು ಉಲ್ಲಂಘನೆ. ಈ ಕುರಿತು ಮಹಾನಗರ ಪಾಲಿಕೆಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ರಾಜಪ್ಪ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ