ಬೆಳಗಾವಿ: ನಗರದ ಮರಾಠಾ ಲಘು ಪದಾತಿ ರೆಜಿಮೆಂಟಲ್ ಕೇಂದ್ರದಲ್ಲಿ (ಎಂಎಲ್ಐಆರ್ಸಿ) ಡಿಎಸ್ಸಿ (ರಕ್ಷಣಾ ಭದ್ರತಾ ಪಡೆ) ಹುದ್ದೆಗೆ ಮೇ 6ರಿಂದ 8ರವರೆಗೆ ನೇಮಕಾತಿ ರಾರಯಲಿ ಆಯೋಜಿಸಲಾಗಿದೆ. ಸಾಮಾನ್ಯ ಕರ್ತವ್ಯ ಮತ್ತು ಗುಮಾಸ್ತ ಹುದ್ದೆಗೆ ನೇಮಕಾತಿ ನಡೆಯಲಿದೆ. ಎಸ್ಸೆಸ್ಸೆಲ್ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿದ ಮಾಜಿ ಸೈನಿಕರು ರಾರಯಲಿಯಲ್ಲಿ ಪಾಲ್ಗೊಳ್ಳಬಹುದು. ಡಿಎಸ್ಸಿಯ ಸೈನಿಕ ಹುದ್ದೆಗೆ 46 ವರ್ಷ ಮತ್ತು ಗುಮಾಸ್ತ ಹುದ್ದೆಗೆ 48 ವರ್ಷ ದಾಟಿರಬಾರದು. ರಾರಯಲಿಗೆ ಬರುವವರು ಸೈನ್ಯದ ಬಿಡುಗಡೆ ಪುಸ್ತಕ, ಶೈಕ್ಷಣಿಕ ಅರ್ಹತೆಯ ಪ್ರಮಾಣ ಪತ್ರ, ಶಾಲಾ ವರ್ಗಾವಣೆ, ಜಾತಿ, ವಾಸ, ನಡತೆ ಪ್ರಮಾಣ ಪತ್ರಗಳು, ಸೈನ್ಯದ ಗುಂಪು ವಿಮೆ ದಾಖಲೆ, ಕುಟುಂಬದ ಎಲ್ಲ ಸದಸ್ಯರ ಫೋಟೊ (ಹೆಸರು, ಜನ್ಮ ದಿನಾಂಕ ಸಮೇತ) ಮತ್ತು ಈ ಎಲ್ಲ ದಾಖಲೆಗಳ ಎರಡು ಸೆಟ್ ದೃಢೀಕೃತ ಪ್ರತಿ, ಅಭ್ಯರ್ಥಿಯ 12 ಪಾಸ್ಪೋರ್ಟ್ ಸೈಜ್ ಬಣ್ಣದ ಫೋಟೊಗಳು, ಎಸ್ಪಿ ಸಹಿ ಇರುವ ಪರಿಶೀಲನಾ ಪತ್ರ ತರಬೇಕು ಎಂದು ಎಂಎಲ್ಐಆರ್ಸಿ ಪ್ರಕಟಣೆ ತಿಳಿಸಿದೆ.
ಮೇ 6ರಿಂದ ನೇಮಕಾತಿ ರಾರಯಲಿ
ನಗರದ ಮರಾಠಾ ಲಘು ಪದಾತಿ ರೆಜಿಮೆಂಟಲ್ ಕೇಂದ್ರದಲ್ಲಿ (ಎಂಎಲ್ಐಆರ್ಸಿ) ಡಿಎಸ್ಸಿ (ರಕ್ಷಣಾ ಭದ್ರತಾ ಪಡೆ) ಹುದ್ದೆಗೆ ಮೇ 6ರಿಂದ 8ರವರೆಗೆ ನೇಮಕಾತಿ ರಾರಯಲಿ ಆಯೋಜಿಸಲಾಗಿದೆ...
Vijaya Karnataka 26 Apr 2019, 5:00 am