ಆ್ಯಪ್ನಗರ

ಮಳೆ ಅವಾಂತರ ತಡೆಗೆ ಕಟ್ಟೆಚ್ಚರ ವಹಿಸಲು ಸೂಚನೆ

ಬೆಳಗಾವಿ: ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ...

Vijaya Karnataka 31 Jul 2019, 5:00 am
ಬೆಳಗಾವಿ: ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಾಲಿಕೆ ಅಭಿಯಂತರರು, ಆರೋಗ್ಯ ಶಾಖೆ ಅಧಿಕಾರಿ ಮತ್ತು ನೈರ್ಮಲ್ಯ ನಿರೀಕ್ಷಕರು ತಮ್ಮ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಿ, ಕೂಡಲೇ ಖುದ್ದಾಗಿ ನಿಂತು ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸಬೇಕು ಎಂದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮಂಗಳವಾರ ಆದೇಶಿಸಿದ್ದಾರೆ.
Vijaya Karnataka Web red alert to manage rain disasters
ಮಳೆ ಅವಾಂತರ ತಡೆಗೆ ಕಟ್ಟೆಚ್ಚರ ವಹಿಸಲು ಸೂಚನೆ


ಮಳೆ ನೀರು ಗಟಾರ, ನಾಲಾಗಳ ಮೂಲಕ ಸರಾಗವಾಗಿ ಹರಿದುಹೋಗಬೇಕು. ಎಲ್ಲೆ ಅಡೆತಡೆ ಉಂಟಾದರೆ ಬೇಗನೇ ಸರಿಪಡಿಸಬೇಕು. ನೀರಿನ ಒತ್ತಡ ಅಧಿಕವಿದ್ದರೆ ಅದನ್ನು ಬೇರೆಕಡೆಗೆ ತಿರುವಲು ಸಾಧ್ಯವಿದ್ದರೆ ಆ ಕೆಲಸ ಮಾಡಬೇಕು. ನಾಲಾ, ಗಟಾರಿಗೆ ಸಿಡಿ ಅಗತ್ಯವಿದ್ದರೆ ನಿರ್ಮಾಣ ಮಾಡಬೇಕು. ತಗ್ಗು ಪ್ರದೇಶದ ನೀರನ್ನು ತೆಗೆದು ಸಂಚಾರ ಮತ್ತು ವಾಸಕ್ಕೆ ಅನುಕೂಲ ಕಲ್ಪಿಸಬೇಕೆಂದು ಸೂಚಿಸಿದ್ದಾರೆ.

ಮಂಗಳವಾರ ಬಳ್ಳಾರಿ ನಾಲಾ ಆರಂಭದ ಪ್ರದೇಶಗುಂಟ ನಗರ ಹೊರವಲಯದವರೆಗೆ ಅಧಿಕಾರಿಗಳ ತಂಡದೊಂದಿಗೆ ಪರಿವೀಕ್ಷಣೆ ಮಾಡಿರುವ ಆಯುಕ್ತರು, ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು.

ಮರ, ಟೊಂಗೆ, ವಿದ್ಯುತ್‌ ಕಂಬಗಳು ಬಿದ್ದರೆ ಸಂಬಂಧಿತ ಇಲಾಖೆಯವರ ನೆರವಿನಿಂದ ತೆರವು ಗೊಳಿಸಬೇಕು. ರಕ್ಷಣಾ ಕಾರ್ಯಾಚರಣೆಯಲ್ಲಿರುವ ತಂಡಗಳು ಜನರ ಕೂಗಿಗೆ ತ್ವರಿತವಾಗಿ ಸ್ಪಂದಿಸಬೇಕು. ಬೇಕಿರುವ ವಸ್ತು, ಜೆಸಿಬಿ, ಟ್ರ್ಯಾಕ್ಟರ್‌, ಉಸುಕಿನ ಚೀಲ ಸಿದ್ಧವಾಗಿರಬೇಕು. ನೀರು ಆವರಿಸಿಕೊಳ್ಳುವ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಬೇಕು. ತಾತ್ಕಾಲಿಕ ಗಟಾರ ನಿರ್ಮಾಣ, ಗಂಜಿ ಕೇಂದ್ರ ಸ್ಥಾಪನೆ, ಮಳೆ ನಂತರದ ಸಾಂಕ್ರಾಮಿಕ ರೋಗ, ಔಷಧ ಸಂಗತಿಗಳ ಕಡೆಗೂ ಗಮನ ನೀಡಬೇಕು. ಅಧಿಕಾರಿ ಮತ್ತು ಸಿಬ್ಬಂದಿ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು. ಜತೆಗೆ ಸರಕಾರಕ್ಕೂ ವರದಿ ಸಲ್ಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ