ಆ್ಯಪ್ನಗರ

ಪ್ಲಾಸ್ಟಿಕ್‌ ಬಳಕೆ ತಗ್ಗಿಸಿ, ಪರ್ಯಾಯ ವಸ್ತು ಜನಪ್ರಿಯಗೊಳಿಸಲು ಸಲಹೆ

ಬೆಳಗಾವಿ: ಹೋಟೆಲ್‌ ಉದ್ಯಮಿಗಳು ...

Vijaya Karnataka 13 Jun 2018, 5:00 am
ಬೆಳಗಾವಿ: ಹೋಟೆಲ್‌ ಉದ್ಯಮಿಗಳು ಪ್ಲಾಸ್ಟಿಕ್‌ ಬಳಕೆ ತಗ್ಗಿಸಬೇಕಲ್ಲದೇ, ಪ್ಲಾಸ್ಟಿಕ್‌ಗೆ ಪರಾರ‍ಯಯ ವಸ್ತುಗಳ ಬಳಕೆಯನ್ನು ಜನಪ್ರಿಯಗೊಳಿಸಬೇಕು. ಈ ಮೂಲಕ ಸುಂದರ ಮತ್ತು ಸ್ವಚ್ಛ ಬೆಳಗಾವಿ ನಿರ್ಮಾಣಕ್ಕೆ ಕೊಡುಗೆ ನೀಡಬೇಕೆಂದು ಮಹಾನಗರ ಪಾಲಿಕೆ ಮನವಿ ಮಾಡಿದೆ.
Vijaya Karnataka Web BLG-1206-2-52-12RAJU-4


ರಾಮಲಿಂಗ್‌ಖಿಂಡ್‌ ಗಲ್ಲಿಯ ಟಿಳಕಚೌಕದಲ್ಲಿರುವ ಬೆಳಗಾವಿ ಹೋಟೆಲ್‌ ಮಾಲೀಕರ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ಹೋಟೆಲ್‌ ಮಾಲೀಕರು ಮತ್ತು ಪಾಲಿಕೆ ಆಡಳಿತ ವ್ಯವಸ್ಥೆಯ ಸಭೆಯಲ್ಲಿ ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ಲಾಸ್ಟಿಕ್‌ಗೆ ಪರಾರ‍ಯಯವಾಗಿ ಇಂದು ಅನೇಕ ಸಾಧನಗಳು ಬಂದಿವೆ. ಕಬ್ಬಿನ ಸಿಪ್ಪೆ, ತರಕಾರಿ ತ್ಯಾಜ್ಯಗಳಿಂದ ತಯಾರಿಸಿದ ಬ್ಯಾಗ್‌ಗಳು, ಊಟ, ಉಪಾಹಾರಕ್ಕೆ ಬಳಸಿ ನಂತರ ತಿನ್ನಬಹುದಾದ ಸ್ಪೂನ್‌ಗಳೂ ಇವೆ. ಇವುಗಳನ್ನು ಜನರಿಗೆ ಪರಿಚಯಿಸಬೇಕು. ಪ್ಲಾಸ್ಟಿಕ್‌ ಬಳಸದಂತೆ ಜನರಿಗೂ ಮನವರಿಕೆ ಮಾಡಬೇಕು. ನಿಧಾನಕ್ಕೆ ಜನ ಇದಕ್ಕೆ ಹೊಂದಿಕೊಳ್ಳುತ್ತಾರೆ. ಇದರಿಂದ ಪ್ಲಾಸ್ಟಿಕ್‌ನಿಂದ ಪರಿಸರದ ಮೇಲೆ ಆಗುವ ಅಪಾಯ ತಗ್ಗುತ್ತದೆ. ಒಂದು ವೇಳೆ ಪ್ಲಾಸ್ಟಿಕ್‌ ಬಳಕೆ ಅನಿವಾರ್ಯದ ಸಂದರ್ಭವಿದ್ದರೆ ಮರುಬಳಕೆಯ ಪ್ಲಾಸ್ಟಿಕ್‌ ಬಳಸಬೇಕು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಹೋಟೆಲ್‌ ಉದ್ಯಮಿಗಳು ಮಾತನಾಡಿ, ಪ್ಲಾಸ್ಟಿಕ್‌ ಬಳಕೆ ನಿಲ್ಲಿಸುವುದರಿಂದ ತಮಗೆ ಆಗುವ ತೊಂದರೆಗಳನ್ನು ಹೇಳಿಕೊಂಡು, ಸಾಧ್ಯವಾದಷ್ಟು ಕಡಿಮೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ರಸ್ತೆ ಬದಿ ಆಹಾರ ವಿತರಿಸುವ ಡಬ್ಬಾ ಅಂಗಡಿಗಳಿಗೂ ಈ ನಿಯಮ ವಿಸ್ತರಿಸಬೇಕು. ಸ್ವಚ್ಛತೆ ಕಾಯ್ದುಕೊಳ್ಳುವ ಕುರಿತು ತಿಳಿವಳಿಕೆ ನೀಡಬೇಕು ಎಂದು ಕೋರಿದರು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಆಯುಕ್ತ ಕೃಷ್ಣಗೌಡ ತಾಯಣ್ಣವರ್‌, ಆರೋಗ್ಯಾಧಿಕಾರಿ ಡಾ. ಶಶಿಧರ ನಾಡಗೌಡ, ಬೆಳಗಾವಿ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ವಿಜಯ ಬಿ.ಸಾಲ್ಯಾನ್‌, ಉಪಾಧ್ಯಕ್ಷ ಗಿರೀಶ್‌ ಪೈ ವೇದಿಕೆ ಮೇಲಿದ್ದರು. ತಾರಾನಾಥ ಶೆಟ್ಟಿ, ಇರ್ಷಾದ್‌ ಸೌದಾಗರ್‌, ಬಾಳಕೃಷ್ಣ ಪೈ, ಶಾಮಸುಂದರ ರಾವ್‌, ಅಜಿತ್‌ ಶಾನಬಾಗ ಒಳಗೊಂಡು ನೂರಾರು ಉದ್ಯಮಿಗಳು ಪಾಲ್ಗೊಂಡಿದ್ದರು.

ಟ್ರೇಡ್‌ ಲೈಸೆನ್ಸ್‌ ನವೀಕರಣ ಮೇಳ: ಹೋಟೆಲ್‌ ಉದ್ಯಮಿಗಳು ಹಾಗೂ ಅಧಿಕಾರಿಗಳ ಸಭೆ ಸಂದರ್ಭದಲ್ಲೇ ಟ್ರೇಡ್‌ ಲೈಸೆನ್ಸ್‌ ನವೀಕರಣ ಮೇಳ ಆಯೋಜಿಸಲಾಗಿತ್ತು. ಹಲವು ಆಹಾರೋದ್ಯಮಿಗಳು ಇದರ ಪ್ರಯೋಜನ ಪಡೆದುಕೊಂಡರು. ಹಳೇ ಲೈಸೆನ್ಸ್‌ ನವೀಕರಣ ಹಾಗೂ ಹೊಸ ಲೈಸೆನ್ಸ್‌ಗೆ ಬೇಕಿರುವ ಅಗತ್ಯ ದಾಖಲೆ, ಶುಲ್ಕ ಪಡೆಯಲಾಯಿತು. ಬುಧವಾರವೂ ಟ್ರೇಡ್‌ ಲೈಸೆನ್ಸ್‌ ಮೇಳ ಕಾರ‍್ಯ ನಿರ್ವಹಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ