ಆ್ಯಪ್ನಗರ

ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿರೋಧಿಸಿ ವಕೀಲರಿಂದ ಮನವಿ

ಹುಕ್ಕೇರಿ: ಮೋಟಾರ ವಾಹನ ಕಾಯಿದೆ-1988ಕ್ಕೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿ ...

Vijaya Karnataka 20 Sep 2019, 5:00 am
ಹುಕ್ಕೇರಿ: ಮೋಟಾರ ವಾಹನ ಕಾಯಿದೆ-1988ಕ್ಕೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಣಯಿಸಿದ ಹುಕ್ಕೇರಿ ವಕೀಲರ ಸಂಘದ ಸದಸ್ಯರು ಗುರುವಾರ ಉಪತಹಸೀಲ್ದಾರ್‌ ಎನ್‌.ಆರ್‌. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web 19 HUKKERI 01_53


ಮೊದಲು ಸ್ಥಳೀಯ ವಕೀಲರ ಭವನದಲ್ಲಿಸಂಘದ ಸದಸ್ಯರ ಸಭೆ ಜರುಗಿತು. ಸಾರ್ವಜನಿಕರು, ವಕೀಲರು, ಕಕ್ಷಿದಾರರಿಗೆ ಸಾಕಷ್ಟು ತೊಂದರೆಗಳನ್ನುಂಟು ಮಾಡಿರುವ ವಾಹನ ಕಾಯಿದೆ ತಿದ್ದುಪಡಿಯನ್ನು ಕೇಂದ್ರ ಸರಕಾರ 15 ದಿನದೊಳಗೆ ಹಿಂಪಡೆಯಬೇಕು. ನಂತರದಲ್ಲೂಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಸಭೆಯಲ್ಲಿನಿರ್ಣಯಿಸಲಾಯಿತು.

ಈ ವೇಳೆ ಹಿರಿಯ ನ್ಯಾಯವಾದಿಗಳಾದ ಪಿ.ಆರ್‌. ಚೌಗಲಾ. ಎ.ಎಂ. ಹ್ಯಾಟಗೋಳ, ಆರ್‌.ವಿ. ಜೋಶಿ, ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ಅವರಗೋಳ, ವಕೀಲರ ಸಂಘದ ಕಾರ್ಯದರ್ಶಿ ಎಚ್‌.ಎಲ್‌. ಪಾಟೀಲ, ಭೀಮಸೇನ ಬಾಗಿ, ಕೆ.ಬಿ. ಕುರಬೇಟ್‌, ಬಿ.ಕೆ. ಮಗೆನ್ನವರ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ