ಆ್ಯಪ್ನಗರ

ನಾನಾ ಬೇಡಿಕೆಗೆ ಒತ್ತಾಯಿಸಿ ಖಾಸಗಿ ವಿದ್ಯಾಸಂಸ್ಥೆಯ ನೌಕರರಿಂದ ಮನವಿ

ಬೈಲಹೊಂಗಲ: 2006ರಲ್ಲಿಕಾಲ್ಪನಿಕ ವೇತನ ವರದಿ ಜಾರಿಯ ...

Vijaya Karnataka 3 Nov 2019, 5:00 am
ಬೈಲಹೊಂಗಲ: 2006ರಲ್ಲಿಕಾಲ್ಪನಿಕ ವೇತನ ವರದಿ ಜಾರಿಯ ಬಳಿಕ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿನೇಮಕಾಗಿ ಹೊಂದಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಳೇ ನಿಶ್ಚಿತ ಪಿಂಚಣಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ಶನಿವಾರ ತಹಸೀಲ್ದಾರ್‌ ಡಾ. ದೊಡ್ಡಪ್ಪ ಹೂಗಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
Vijaya Karnataka Web 2HTP8_53


ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ನೌಕರರ ಹೋರಾಟ ಸಮನ್ವಯ ಸಮಿತಿ, ಮಾಧ್ಯಮಿಕ ಶಾಲಾ ನೌಕರರ ಸಂಘಗಳ ಸದಸ್ಯರು ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿಗಳ ನೇತೃತ್ವದಲ್ಲಿಸರಕಾರಕ್ಕತ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.

ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ. ನಂದೆನ್ನವರ ಮಾತನಾಡಿ, ದಶಕಗಳಿಂದ ಇಲ್ಲಿನ ನೌಕರರು ಮತ್ತು ಆಡಳಿತ ಮಂಡಳಿಯವರು ಹಲವು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಅನೇಕ ಹೋರಾಟಗಳನ್ನು ಮಾಡುತ್ತಿವೆ. ಆದರೂ ಸರಕಾರಗಳು ಯಾವುದೇ ಬೇಡಿಕೆಗಳನ್ನು ಈಡೇರಿಸದೆ ಹುಸಿ ಭರವಸೆಗಳನ್ನು ನೀಡುತ್ತಾ ಬರುತ್ತಿವೆ. ಇನ್ನು ತಡ ಮಾಡದೆ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಶೀಘ್ರ ಸಭೆ ಕರೆದು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿಸಂಪಗಾಂವ ಆರ್‌ಇಎಸ್‌ ಸಂಸ್ಥೆ ಮತ್ತು ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ಶಂಕರೆಪ್ಪ ಸಿದ್ನಾಳ, ಚಂದ್ರು ಮೆಳವಂಕಿ, ಯು.ಬಿ. ಬಾಗೇವಾಡಿ, ನಿಸ್ಸಾರಹ್ಮದ ತಿಗಡಿ, ಎಸ್‌.ವಿ. ಯರಡ್ಡಿ, ಬಿ.ಟಿ. ಗುರಕ್ಕನವರ, ಎಸ್‌.ಐ. ಪಾಟೀಲ, ಶ್ರೀಕಾಂತ ಉಳ್ಳೇಗಡ್ಡಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ