ಆ್ಯಪ್ನಗರ

ರೈತರ ಖಾತೆಗೆ ಹಣ ಜಮಾ ಮಾಡಲು ಆಗ್ರಹ

ಕಡಬಿ: ಸರಕಾರಿ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ, ಕಡಬಿ - ಶಿವಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ ಸಿಬ್ಬಂದಿಯಿಂದ ಕೃಷಿಕರಿಗೆ ...

87654322 25 Jul 2018, 5:00 am
ಕಡಬಿ: ಸರಕಾರಿ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ನಿಟ್ಟಿನಲ್ಲಿ, ಕಡಬಿ - ಶಿವಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ ಸಿಬ್ಬಂದಿಯಿಂದ ಕೃಷಿಕರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡ ದೇವೇಂದ್ರ ಮೆಣಸಿ ಆರೋಪಿಸಿದರು.
Vijaya Karnataka Web BEL-24 KADABI PHOTO 1


ಅವರು ಜು.24ರಂದು ಸಹಕಾರಿ ಬ್ಯಾಂಕ್‌ ಕಾರ್ಯಾಲಯದ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸರಕಾರ ನೀಡಿದ ಸಾಲ ಮನ್ನಾದ ಹಣವು ಇನ್ನೂ ರೈತರ ಖಾತೆಗೆ ಜಮಾ ಆಗಿಲ್ಲ, ಜು. 31ರ ಒಳಗೆ ಹಣ ಜಮಾ ಆಗದಿದ್ದರೆ ಆ.1ರಂದು ರೈತರು ಉಗ್ರ ಹೋರಾಟ ಮಾಡಲಿದ್ದಾರೆ, ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಸಂಘದ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದರು.

ಯಲ್ಲಪ್ಪ ಹಮ್ಮನ್ನವರ, ಲಕ್ಷ ್ಮಣ ಮಾಳೈನ್ನವರ, ಸುರೇಶಗೌಡ ಪಾಟೀಲ, ಶ್ರೀಧರ ಕಾಂಬಳೆ, ಮಹಾದೇವ ಮಾಳೈನ್ನವರ, ಲಕ್ಷ ್ಮಣ ಮುಕ್ಕನ್ನವರ, ಮಹಾದೇವ ಡೋಣ, ಸುರೇಂದ್ರ ಹುಂಡೇಕಾರ ಸೇರಿದಂತೆ ಅನೇಕರು ಇದ್ದರು. ಜು. 31ರೊಳಗೆ ರೈತರ ಖಾತೆಗೆ ಹಣ ಜಮಾ ಮಾಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಿದ್ಧಾರೂಢ ರೇಬ್ಬನ್ನವರ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ