ಆ್ಯಪ್ನಗರ

ರಾಸಾಯನಿಕ ಮಿಶ್ರಿತ ಕೀಟನಾಶಕ ಖರೀದಿಸದಿರಲು ಮನವಿ

ಹುಕ್ಕೇರಿ: ಬೆಳೆಗಳಿಗೆ ಸಿಂಪಡಿಸುವ ಜೈವಿಕ ಕೀಟನಾಶಕ ಔಷಧಿಗಳಲ್ಲಿ ರಸಾಯನಿಕಗಳ ...

Vijaya Karnataka 28 Aug 2019, 5:00 am
ಹುಕ್ಕೇರಿ: ಬೆಳೆಗಳಿಗೆ ಸಿಂಪಡಿಸುವ ಜೈವಿಕ ಕೀಟನಾಶಕ ಔಷಧಿಗಳಲ್ಲಿ ರಸಾಯನಿಕಗಳ ಮಿಶ್ರಣ ಸೇರ್ಪಡಿಸಿ ರೈತರಿಗೆ ಮಾರಾಟ ಮಾಡಿ ಮೋಸ ಮಾಡುತ್ತಿರುವ ದೂರುಗಳಿದ್ದು ಅಂಗಡಿಕಾರರು ಯಾವುದೇ ರೀತಿಯ ಮಿಶ್ರಿತ ಔಷಧಿಗಳನ್ನು ಮಾರಾಟ ಮಾಡಬಾರದೆಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌.ಪಟಗುಂದಿ ತಿಳಿಸಿದ್ದಾರೆ.
Vijaya Karnataka Web BLG-2708-2-52-BEL-27 HUKKERI 01


ಅವರು ಹುಕ್ಕೇರಿ ಪಟ್ಟಣ, ಸಂಕೇಶ್ವರ, ಯಮಕನಮರಡಿ, ಪಾಶ್ಚಾಪುರ ಹಾಗೂ ಹುಕ್ಕೇರಿ ವಲಯಗಳಲ್ಲಿ ಸೇರಿದಂತೆ ನಾನಾ ಗ್ರಾಮಗಳ ರಸಗೊಬ್ಬರ ಅಂಗಡಿಗಳಲ್ಲಿ ಜೈವಿಕ, ರಾಸಾಯನಿಕ ಹಾಗೂ ನಾನಾ ಕೃಷಿ ಪರಿಕರ ಮಾರಾಟದ ಅಂಗಡಿಗಳನ್ನು ಪರಿಶೀಲಿಸಿ ಮಾತನಾಡಿದರು.

ಮೀಶ್ರಿತವಾಗಿರುವ ರಾಸಾಯನಿಕ ಕೀಟನಾಶಕಗಳಿಂದ ನಿಯಂತ್ರಣವಾಗದ ಕೀಟ-ರೋಗಗಳ ಹತೋಟಿ ಮಾಡುತ್ತವೆ ಎಂದು ಹೇಳಿ ಜೈವಿಕ ಕೀಟ ನಾಶಕಗಳಲ್ಲೂ ರಾಸಾಯನ ಬೆರೆಸಿ ಮಾರಾಟ ಮಾಡಲಾಗುತ್ತಿದೆ ಎಂಬ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆ ಬೇರೆ ಮಳಿಗೆಗಳಿಂದ ಇವುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತಿದೆ. ಈ ಪರೀಕ್ಷೆಗಳ ವರದಿ ಬರುವವರೆಗೂ ಇವುಗಳ ಮಾರಾಟದ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ ಎಂದರು.

ಈ ಕುರಿತು ಮಾರಾಟಗಾರರು, ವಿತರಕರಿಗೂ ನಿರ್ದೇಶನ ನೀಡಲಾಗಿದೆ. ಪರೀಕ್ಷಾ ವರದಿ ಬರುವವರೆಗೆ ಸಿಗುವವರೆಗೂ ರೈತರು ಕೀಟನಾಶಕಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದೆಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ