ಆ್ಯಪ್ನಗರ

ಹವಾಮಾನ ವೈಪರೀತ್ಯದ ಭಾದೆ ನೀಗಿಸುವ ಸಂಶೋಧನೆಗಳಾಗಲಿ

ಮೂಡಲಗಿ: ಹವಾಮಾನ ವೈಪರೀತ್ಯದಿಂದ ಮಳೆ ಹಾಗೂ ಉಷ್ಣಾಂಶದಲ್ಲಿ ಏರುಪೇರಾಗಿ ಬೆಳೆಗಳಿಗೆ ನೀರಿನ ಸಮಸ್ಯೆ, ರೋಗ ಮತ್ತು ಕೀಟಗಳ ಭಾದೆ ಹೆಚ್ಚಾಗಿದೆ...

Vijaya Karnataka 31 May 2019, 5:00 am
ಮೂಡಲಗಿ : ಹವಾಮಾನ ವೈಪರೀತ್ಯದಿಂದ ಮಳೆ ಹಾಗೂ ಉಷ್ಣಾಂಶದಲ್ಲಿ ಏರುಪೇರಾಗಿ ಬೆಳೆಗಳಿಗೆ ನೀರಿನ ಸಮಸ್ಯೆ, ರೋಗ ಮತ್ತು ಕೀಟಗಳ ಭಾದೆ ಹೆಚ್ಚಾಗಿದೆ. ಕೃಷಿ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಮಳೆ ನೀರಿನ ಸಂಗ್ರಹಣೆ, ಸದ್ಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷ ಣೆ ವಿಧಾನಗಳ ಕುರಿತು ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕಾಗಿದೆ ಎಂದು ಕುಲಪತಿ ಡಾ. ಕೆ.ಎಂ. ಇಂದಿರೇಶ ಹೇಳಿದರು.
Vijaya Karnataka Web BEL-30MDL1


ಅವರು ಸಮೀಪದ ಅರಬಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ವಲಯದ ಪ್ರಾದೇಶಿಕ ತೋಟಗಾರಿಕಾ ಸಂಶೋಧನೆ, ವಿಸ್ತರಣೆ, ಸಲಹೆ ಹಾಗೂ ಯೋಜನೆ ರಚನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನಿಗಳ ಸಂಶೋಧಿಸಿದ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವುದು ಮತ್ತು ಮುಂದಿನ ದಿನಗಳಲ್ಲಿ ರೈತರಿಗೆ ಬೇಕಾಗುವ ತಂತ್ರಜ್ಞಾನ ಸಂಶೋಧನೆಯ ಯೋಜನೆಗಳನ್ನು ರೂಪಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ರಾಜ್ಯ ಸರಕಾರ ಪ್ರಾಯೋಜಿತ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಅಡಿಯಲ್ಲಿ ಕಡಿಮೆ ವೆಚ್ಚದಲ್ಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಕೃಷಿ ಮಾಡುವ ಸಂಶೋಧನೆಯನ್ನು ಕೈಗೊಂಡು ರೈತರಿಗೆ ತಂತ್ರಜ್ಞಾನ ವರ್ಗಾವಣೆ ಮಾಡಬೇಕೆಂದು ಸೂಚಿಸಿದರು.

ಮಹಾವಿದ್ಯಾಲಯದ ಡೀನ್‌ ಡಾ. ನಾಗೇಶ ನಾಯಕ್‌, ಸಂಶೋಧನಾ ನಿರ್ದೇಶಕ ಡಾ. ಎನ್‌. ಬಸವರಾಜ, ವಿಸ್ತರಣಾ ನಿರ್ದೇಶಕ ಡಾ. ವೈ.ಕೆ. ಕೋಟಿಕಲ್‌, ಸ್ನಾತಕೋತ್ತರ ಡೀನ್‌ ಡಾ. ಎಂ.ಎಸ್‌. ಕುಲಕರ್ಣಿ ಕಾರ್ಯಗಾರದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ರಾಜು ಬೈರುಗೋಳ, ಗಿರೀಶ ಹಲಸಗಿ, ರಾಚನ್ನವರ, ಅರವಿಂದ ಬ್ಯಾಡಗಿ, ಬಾಲಚಂದ್ರ ಸಾಯಿಮನೆ ಅವರು ತಾವು ಬೆಳೆಯುವ ನಾನಾ ಬೆಳೆಗಳ ಸ್ಥಿತಿಗತಿ ಮತ್ತು ರೈತರಿಗೆ ಅಗತ್ಯವಿರುವ ತಂತ್ರಜ್ಞಾನ ಸಂಶೋಧನೆ ಕುರಿತು ಮಾತನಾಡಿದರು.

ಮಹಾವಿದ್ಯಾಲಯದ ಸಹ ಸಂಶೋಧನಾ ನಿರ್ದೇಶಕ ಡಾ. ಡಿ.ಆರ್‌. ಪಾಟೀಲ, ಡಾ. ವಿಷ್ಣುವರ್ಧನ, ವಿವಿಧ ವಿದ್ಯಾಲಯಗಳ ಡೀನ್‌ಗಳು, ಪ್ರಾಧ್ಯಾಪಕರು ಮತ್ತು ವಿಜ್ಞಾನಿಗಳು ಭಾಗಿಯಾಗಿದ್ದರು. ಡಾ. ಮಹಾಂತೇಶ ನಾಯಕ್‌ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ