ಆ್ಯಪ್ನಗರ

ಮಾಹಿತಿ ಸಲ್ಲಿಸದ ತಾಪಂ ಇಒ ವಿರುದ್ಧ ಸದಸ್ಯರ ಅಸಮಾಧಾನ

ಖಾನಾಪುರ: ಪಟ್ಟಣದ ತಾಲೂಕು ...

Vijaya Karnataka 22 Oct 2019, 5:00 am
ಖಾನಾಪುರ: ಪಟ್ಟಣದ ತಾಲೂಕು ಪಂಚಾಯಿ ಕಚೇರಿ ಅಧೀನದಲ್ಲಿರುವ ಮತ್ತು ತಾಪಂ ಒಡೆತನದ ಒಟ್ಟು ಆಸ್ತಿ, ಬರತಕ್ಕ ಬಾಡಿಗೆ, ಇದುವರೆಗೂ ಆದ ಖರ್ಚು ಸೇರಿದಂತೆ ಕಳೆದ 2 ವರ್ಷಗಳ ಖರ್ಚು ವೆಚ್ಚವನ್ನು ನೀಡುವಂತೆ ಲಿಖಿತ ಅರ್ಜಿ ಸಲ್ಲಿಸಿ 10 ತಿಂಗಳಾದರೂ ಮಾಹಿತಿ ಸಲ್ಲಿಸದ ತಾಪಂ ಇಒ ವಿರುದ್ಧ ಮಂಗೇನಕೊಪ್ಪ ಕ್ಷೇತ್ರದ ತಾಪಂ ಸದಸ್ಯ ಶಿವಾನಂದ ಚಲವಾದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Vijaya Karnataka Web resentment of members against tp eo for not submitting information
ಮಾಹಿತಿ ಸಲ್ಲಿಸದ ತಾಪಂ ಇಒ ವಿರುದ್ಧ ಸದಸ್ಯರ ಅಸಮಾಧಾನ


ಈ ವಿಷಯವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾಯಿತ ಜನಪ್ರತಿನಿಧಿಯಾದ ತಾವು ತಾಪಂ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಮತ್ತು ವಿಳಂಬ ಧೋರಣೆಯನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದ್ದಾರೆ. ಕೂಡಲೇ ಜಿಪಂ ಸಿಇಒ ತಾಪಂ ಇಒ ಅವರಿಗೆ ನಿರ್ದೇಶನ ನೀಡಿ ತಮಗೆ ಅಗತ್ಯ ಮಾಹಿತಿ ದೊರಕಿಸಿಕೊಡಲು ಅವರು ಈ ಮೂಲಕ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ