ಆ್ಯಪ್ನಗರ

ಶಾಲೆಗೆ ಕಮಾನು ನಿರ್ಮಿಸಿಕೊಟ್ಟ ನಿವೃತ್ತ ಗ್ಯಾಂಗ್‌ಮನ್‌

ಕಾಗವಾಡ: ಅರವತ್ತರ ವಯಸ್ಸಿನ ಹಿರಿಯ ನಾಗರಿಕರೊಬ್ಬರು ಉಗಾರಖುರ್ದ ಲಕ್ಷ್ಮೀಗುಡಿ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯದ್ವಾರಕ್ಕೆ ಸ್ವಂತ ಖರ್ಚಿನಲ್ಲಿ ...

Vijaya Karnataka 17 Jun 2018, 5:00 am
ಕಾಗವಾಡ: ಅರವತ್ತರ ವಯಸ್ಸಿನ ಹಿರಿಯ ನಾಗರಿಕರೊಬ್ಬರು ಉಗಾರಖುರ್ದ ಲಕ್ಷ್ಮೀಗುಡಿ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯದ್ವಾರಕ್ಕೆ ಸ್ವಂತ ಖರ್ಚಿನಲ್ಲಿ ಕಮಾನು ನಿರ್ಮಿಸಿಕೊಟ್ಟಿದ್ದಾರೆ.
Vijaya Karnataka Web retired gangman built an archway to school
ಶಾಲೆಗೆ ಕಮಾನು ನಿರ್ಮಿಸಿಕೊಟ್ಟ ನಿವೃತ್ತ ಗ್ಯಾಂಗ್‌ಮನ್‌


ಬಾಗೇವಾಡಿಯ ನೀರಾಪಟ್ಟಿ ಮೂಲದ ನೇಮಣ್ಣಾ ತವನಪ್ಪಾ ರೊಟ್ಟಿ ಕಳೆದ 30 ವರ್ಷಗಳಿಂದ ಉಗಾರ, ಶೇಡಬಾಳ ಭಾಗದಲ್ಲಿ ರೈಲ್ವೇ ಗ್ಯಾಂಗ್‌ಮನ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಈ ಕೈಂಕರ್ಯ ಮಾಡಿದ್ದಾರೆ. ಕಾಗವಾಡ ಬಿಇಒ ಎ.ಎಸ್‌. ಜೋಡಗಿರಿ, ದೈಹಿಕ ಪರಿವೀಕ್ಷ ಕ ಸಿಎಂ ಸಾಂಗಲೆ, ಎಂ.ಎನ್‌.ನಾಟೇಕರ್‌, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಜಾಯಗೊಂಡೆ, ಎಲ್‌.ಕೆ. ಕಮತೆ, ಎ.ಕೆ. ಜಮಾದಾರ, ಮುಖ್ಯಾಧ್ಯಾಪಕ ಎಚ್‌.ಎಫ್‌. ಸಣ್ಣಕ್ಕಿ ಅವರ ಸಮ್ಮುಖದಲ್ಲಿ ಸ್ವತಃ ನೇಮಣ್ಣಾ ರೊಟ್ಟಿ ಅವರು ಉದ್ಘಾಟನೆ ನೆರವೇರಿಸಿದರು.

ಕಮಾನು ಉದ್ಘಾಟನೆ ವೇಳೆ ''ನಾನು ಶಾಲೆ ಕಲಿತಿಲ್ಲ.. ಅದರ ಪಶ್ವಾತ್ತಾಪ ನನಗೆ ಈಗ ಆಗುತ್ತಿದೆ. ಇಂದಿನ ಮಕ್ಕಳಾದರೂ ಚೆನ್ನಾಗಿ ಓದಿ ಒಳ್ಳೆಯ ನಾಗರಿಕರಾಗಬೇಕು'' ಎಂದು ಅವರು ಉದ್ಗರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ