ಆ್ಯಪ್ನಗರ

ರಸ್ತೆ ಅಪಘಾತ: ಮಹಿಳೆ ಸಾವು, 6 ಜನರಿಗೆ ಗಾಯ

ಯಮಕನಮರಡಿ: ಸಮೀಪದ ಚಿಕಾಲಗುಡ್ಡ ಕ್ರಾಸ್‌ ...

Vijaya Karnataka 27 Oct 2019, 5:00 am
ಯಮಕನಮರಡಿ: ಸಮೀಪದ ಚಿಕಾಲಗುಡ್ಡ ಕ್ರಾಸ್‌ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರಲ್ಲಿಶುಕ್ರವಾರ ರಾತ್ರಿ ಎರಡು ಪಿಕಪ್‌ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ.
Vijaya Karnataka Web road accident woman death six injured
ರಸ್ತೆ ಅಪಘಾತ: ಮಹಿಳೆ ಸಾವು, 6 ಜನರಿಗೆ ಗಾಯ


ಮಹಾರಾಷ್ಟ್ರದ ಗಡಿಹಿಂಗ್ಲಜ ತಾಲೂಕಿನ ಇರದಗುಚ್ಚಿ ಗ್ರಾಮದ ತಂಗೆವ್ವಾ ಬಸ್ಸಪ್ಪ ಕಾಂಬಳೆ(40) ಮೃತ ಮಹಿಳೆ. ಎರಡೂ ವಾಹನಗಳ ಚಾಲಕರಾದ ನಿಡಸೋಸಿ ಗ್ರಾಮದ ನಿಜಲಿಂಗೇಶ್ವರ ಚಿದಾನಂದ ಬಾಲಪ್ಪಗೋಳ (24), ನಿಸಾರ ಹಸನ ಮಕಾಂದರ (31) ಗಾಯಗೊಂಡಿದ್ದು, ಗಡಿಹಿಂಗ್ಲಜ ತಾಲೂಕಿನ ಹತ್ತರಕಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಗಾಯಾಳು ಇದರಗುಚ್ಚಿಯ ಮಹೇಶ ಬಸವಣ್ಣಿ ಯರಗಟ್ಟಿ (40), ಸಂಗೀತಾ ಮಹೇಶ ಯರಗಟ್ಟಿ (14), ಚಂದನಿ ಮಹೇಶ ಯರಗಟ್ಟಿ (14), ಕುರಣಿ ಗ್ರಾಮದ ಶಿವಪ್ಪ ಬಸಪ್ಪ ಘೋಡಗೇರಿ (27) ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಕಡೆಯಿಂದ ಸಂಕೇಶ್ವರ ಕಡೆಗೆ ಹಾಗೂ ಸಂಕೇಶ್ವರ ಕಡೆಯಿಂದ ಇದರಗುಚ್ಚಿ ಕಡೆಗೆ ಬರುತ್ತಿದ್ದಾಗ ಪಿಕಪ್‌ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ