ಆ್ಯಪ್ನಗರ

ನ್ಯಾಯವಾದಿ ಮೇಲೆ ಹಲ್ಲೆಆರೋಪ; ಕ್ರಮಕ್ಕೆ ಆಗ್ರಹಿಸಿ ರಸ್ತೆ ತಡೆ

ಬೆಳಗಾವಿ: ನ್ಯಾಯವಾದಿಯೊಬ್ಬರ ಮೇಲೆ ಶಹಾಪುರ ಪೊಲೀಸ್‌ ಠಾಣೆಯ ...

Vijaya Karnataka 6 Nov 2020, 5:00 am
ಬೆಳಗಾವಿ: ನ್ಯಾಯವಾದಿಯೊಬ್ಬರ ಮೇಲೆ ಶಹಾಪುರ ಪೊಲೀಸ್‌ ಠಾಣೆಯ ಸಿಬ್ಬಂದಿ ಹಲ್ಲೆಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ನ್ಯಾಯವಾದಿಗಳು ನಗರದ ಕೋರ್ಟ್‌ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Vijaya Karnataka Web 5LBS3_53
ಬೆಳಗಾವಿಯ ಕೋರ್ಟ್‌ ಎದುರು ರಸ್ತೆ ತಡೆದು ಪ್ರತಿಭಟಿಸಿದ ನ್ಯಾಯವಾದಿಗಳು.


ನಗರದ ಶಹಾಪುರ ನಿವಾಸಿ, ನ್ಯಾಯವಾದಿ ಶೀತಲ… ರಾಮಶೆಟ್ಟಿ ಅವರು ಗೆಳೆಯರೊಂದಿಗೆ ಮನೆಯ ಎದುರು ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಶಹಾಪುರ ಠಾಣೆಯ ಪೊಲೀಸರು ನ್ಯಾಯವಾದಿ ಮೇಲೆ ವಿನಾಕಾರಣವಾಗಿ ಹಲ್ಲೆಮಾಡಿದ್ದಾರೆ. ಇದರಿಂದಾಗಿ ನ್ಯಾಯವಾದಿ ಶೀತಲ್‌ ಅವರು ಗಾಯಗೊಂಡಿದ್ದಾರೆ. ಹಲ್ಲೆಮಾಡಿರುವ ಪೊಲೀಸರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಪೊಲೀಸರು ವಿರುದ್ಧ ಪ್ರಕರಣವನ್ನು ಕೂಡ ದಾಖಲಿಸಿಲ್ಲ. ಕೂಡಲೇ ಹಲ್ಲೆಮಾಡಿರುವ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು. ಶಹಾಪುರ ಠಾಣೆಯ ಇನ್ಸ್‌ಪೆಕ್ಟರ್‌ರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪೊಲೀಸರು ಮತ್ತು ನ್ಯಾಯವಾದಿಗಳ ವಾಗ್ವಾದ ನಡೆಯಿತು. ಒಂದು ಗಂಟೆಗೂ ಹೆಚ್ಚು ಸಮಯದವರೆಗೆ ರಸ್ತೆ ತಡೆ ನಡೆಸಿರುವುದರಿಂದ ಚನ್ನಮ್ಮ ವೃತ್ತ ಮತ್ತು ರಾಯಣ್ಣ ವೃತ್ತದವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಪೊಲೀಸರು ಮಾರ್ಗ ಬದಲಾವಣೆ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ