ಆ್ಯಪ್ನಗರ

ಸಿಬಿಟಿ ಬಳಿ ರಸ್ತೆ ಬದಿ ವ್ಯಾಪಾರ ಬಂದ್‌

ಬೆಳಗಾವಿ : ನಗರದ ಮಾರ್ಕೆಟ್‌ ಪೊಲೀಸ್‌ ಠಾಣೆಯಿಂದ ಕೇಂದ್ರ ಬಸ್‌ ನಿಲ್ದಾಣದ ವರೆಗೆ ರಸ್ತೆ ...

Vijaya Karnataka Web 8 Jan 2019, 5:00 am
ಬೆಳಗಾವಿ : ನಗರದ ಮಾರ್ಕೆಟ್‌ ಪೊಲೀಸ್‌ ಠಾಣೆಯಿಂದ ಕೇಂದ್ರ ಬಸ್‌ ನಿಲ್ದಾಣದ ವರೆಗೆ ರಸ್ತೆ ಬದಿ ಅನಧಿಕೃತ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಸೋಮವಾರ ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಖುದ್ದು ತೆರಳಿ ತೆರವುಗೊಳಿಸಿದ್ದಾರೆ.
Vijaya Karnataka Web BEL-7 LBS 3


ರಸ್ತೆ ಬದಿ ವ್ಯಾಪಾರಸ್ಥರು ಅರ್ಧದಷ್ಟು ರಸ್ತೆಯನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಭೇಟಿ ನೀಡಿದ ಡಿ.ಸಿ. ರಾಜಪ್ಪ, ರಸ್ತೆಯ ಎರಡೂ ಬದಿಯ ವ್ಯಾಪಾರಸ್ಥರನ್ನು ತೆರವುಗೊಳಿಸಿದರು. ಸಂಚಾರಕ್ಕೆ ತೊಂದರೆಯಾಗುವ ರೀತಿಯಲ್ಲಿ ವ್ಯಾಪಾರ ಮಾಡದಂತೆ ತಿಳಿಸಿದರು. ಮುಂದಿನ ದಿನಗಳಲ್ಲಿ ಸೂಚನೆ ಉಲ್ಲಂಘಿಸಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಡಿಸಿಪಿ ಮಹಾನಿಂಗ ನಂದಗಾವಿ, ಉತ್ತರ ಸಂಚಾರಿ ಪೊಲೀಸ್‌ ಠಾಣೆಯ ಸಿಪಿಐ ಆರ್‌.ಆರ್‌.ಪಾಟೀಲ ಮತ್ತಿತರರು ಇದ್ದರು.

ಆಟೋ ಚಾಲಕರಿಗೂ ಎಚ್ಚರಿಕೆ :
ಬಸ್‌ ನಿಲ್ದಾಣದ ಬಳಿ ಆಟೋ ನಿಲ್ದಾಣ ಹೊರತುಪಡಿಸಿ ರಸ್ತೆ ಮಧ್ಯದಲ್ಲಿ ಹಾಗೂ ಅಡ್ಡಾದಿಡ್ಡಿಯಾಗಿ ಆಟೋಗಳನ್ನು ನಿಲುಗಡೆ ಮಾಡದಂತೆ ಆಟೋ ಚಾಲಕರಿಗೆ ಸೂಚಿಸಿದ ಡಿ.ಸಿ. ರಾಜಪ್ಪ, ನಿಯಮ ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ