ಆ್ಯಪ್ನಗರ

ರೋಲ್‌ಬಾಲ್‌: ಭಾರತಕ್ಕೆ ಭರ್ಜರಿ ಜಯ

ಬೆಳಗಾವಿ : '3ನೇ ಏಷ್ಯನ ರೋಲ್‌ಬಾಲ್‌ ಚಾಂಪಿಯನ್‌ಶಿಪ್‌-2019'ರ ಹಿರಿಯರ ವಿಭಾಗದ ಟೂರ್ನಿಯಲ್ಲಿ ಭಾರತ ...

Vijaya Karnataka 22 Feb 2019, 5:00 am
ಬೆಳಗಾವಿ : '3ನೇ ಏಷ್ಯನ ರೋಲ್‌ಬಾಲ್‌ ಚಾಂಪಿಯನ್‌ಶಿಪ್‌-2019'ರ ಹಿರಿಯರ ವಿಭಾಗದ ಟೂರ್ನಿಯಲ್ಲಿ ಭಾರತ ತಂಡವು ಸೌದಿ ಅರೇಬಿಯಾ ತಂಡದ ವಿರುದ್ಧ 11-00 ಅಂಕಗಳ ಅಂತರದಿಂದ ಭರ್ಜರಿ ಜಯಗಳಿಸುವ ಮೂಲ ಶುಭಾರಂಭ ಮಾಡಿದೆ.
Vijaya Karnataka Web BLG-2102-2-52-21PRAMOD6


ಇಲ್ಲಿನ ಶಿವಗಂಗಾ ರೋಲರ್‌ ಸ್ಕೇಟಿಂಗ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಅತಿಥೇಯ ತಂಡದ ಆಟಗಾರರು ಸೌದಿ ಅರೇಬಿಯಾ ತಂಡದ ವಿರುದ್ಧ ಸುಲಭ ಜಯ ಸಾಧಿಸಿದರು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಭಾರತ ತಂಡದ ಆಟಗಾರರು ಎದುರಾಳಿ ತಂಡಕ್ಕೆ ಅಂಕಗಳಿಸಲು ಅವಕಾಶವೇ ಕೊಡಲಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡ ಆಟಗಾರರು ಮೈದಾನದಲ್ಲಿ ಮಿಂಚಿನಂತೆ ಸುಳಿದಾಡಿ ಅಂಕಗಳನ್ನು ಕಲೆಹಾಕಿದರು. ನೇಪಾಳ ಮತ್ತು ಓಮನ್‌ ತಂಡಗಳ ನಡುವಿನ ಟೂರ್ನಿಯ ಎರಡನೇ ಪಂದ್ಯದಲ್ಲಿ ನೇಪಾಳ 21-4 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.

10 ದೇಶಗಳು ಭಾಗಿ: ಇದೇ ಮೊದಲ ಬಾರಿಗೆ ಬೆಳಗಾವಿಯಲ್ಲಿ ಆಯೋಜನೆಗೊಂಡಿರುವ ರೋಲ್‌ಬಾಲ್‌ ಟೂರ್ನಿಯಲ್ಲಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಸೌದಿ ಅರೇಬಿಯಾ, ಕಾಂಬೋಡಿಯಾ, ಮಾಲ್ಡೀವ್ಸ್‌, ಭೂತಾನ, ಓಮನ್‌ ಸೇರಿದಂತೆ ಏಷ್ಯಾದ 10 ದೇಶಗಳ ಪುರುಷ ಮತ್ತು ಮಹಿಳಾ ತಂಡಗಳು ಪಾಲ್ಗೊಂಡಿವೆ. ಪ್ರತಿ ದಿನ ಸಂಜೆ 5ರಿಂದ ರಾತ್ರಿ 10 ಗಂಟೆವರೆಗೆ 5-6 ಪಂದ್ಯಗಳು ನಡೆಯಲಿವೆ ಎಂದು ಕರ್ನಾಟಕ ರೋಲ್‌ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷೆ ಜ್ಯೋತಿ ಚಿಂಡಕ್‌ ತಿಳಿಸಿದರು.

ಟೂರ್ನಿಗೆ ಚಾಲನೆ: ಭಾರತೀಯ ರೋಲ್‌ಬಾಲ್‌ ಫೆಡರೇಶನ್‌ ಅಧ್ಯಕ್ಷ ವಿನೀತ ಕುಬೇರ ಟೂರ್ನಿಗೆ ಚಾಲನೆ ನೀಡಿದರು. ಉಪಾಧ್ಯಕ್ಷ ಮನೋಜ ಯಾದವ್‌, ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಮಾಡೆಲ್‌, ಭಾರತೀಯ ತಂಡದ ಮೆಂಟರ್‌ ದಿವ್ಯಾ ಶರ್ಮಾ, ಆರ್‌.ಆರ್‌. ಮುತಾಲಿಕ, ಮಲ್ಲೇಶ ಚೌಗುಲೆ, ಸಂಗೀತಾ ಚಿಂಡಕ, ರಾಜು ದಭಾಡೆ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ