ಆ್ಯಪ್ನಗರ

ಸಾರಿಗೆ ವಿಭಾಗಗಳಿಗೆ 1.17 ಕೋಟಿ ರೂ. ನಷ್ಟ

ಭಾರತ ಬಂದ್‌ ಹಿನ್ನೆಲೆಯಲ್ಲಿ ಮಂಗಳವಾರ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಗಾವಿ ಮತ್ತು ಚಿಕ್ಕೋಡಿ ಸಾರಿಗೆ ವಿಭಾಗ ಸೇರಿ ಒಟ್ಟು 117 ಕೋಟಿ ರೂ ನಷ್ಟವಾಗಿದೆ...

Vijaya Karnataka 9 Jan 2019, 5:00 am
ಬೆಳಗಾವಿ: ಭಾರತ ಬಂದ್‌ ಹಿನ್ನೆಲೆಯಲ್ಲಿ ಮಂಗಳವಾರ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಬೆಳಗಾವಿ ಮತ್ತು ಚಿಕ್ಕೋಡಿ ಸಾರಿಗೆ ವಿಭಾಗ ಸೇರಿ ಒಟ್ಟು 1.17 ಕೋಟಿ ರೂ. ನಷ್ಟವಾಗಿದೆ. ಬೆಳಗಾವಿ ಸಾರಿಗೆ ವಿಭಾಗದಲ್ಲಿ 67 ಲಕ್ಷ ರೂ. ಮತ್ತು ಚಿಕ್ಕೋಡಿ ಸಾರಿಗೆ ವಿಭಾಗದಲ್ಲಿ 50 ಲಕ್ಷ ರೂ. ನಷ್ಟವಾಗಿದೆ. ಬೆಳಗಾವಿ ಸಾರಿಗೆ ವಿಭಾಗದಿಂದ ಪ್ರತಿದಿನ 570 ಬಸ್‌ಗಳು ವಿವಿಧ ಮಾರ್ಗಗಳಿಗೆ ಸಂಚರಿಸುತ್ತವೆ. ಬಂದ್‌ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 3.30ರ ವರೆಗೆ ಯಾವುದೇ ಬಸ್‌ ಸಂಚಾರ ಇರಲಿಲ್ಲ. ನಂತರ 50 ಬಸ್‌ಗಳು ಮಾತ್ರ ಸಂಚರಿಸಿವೆ.
Vijaya Karnataka Web rs 1 17 crore for transport departments loss
ಸಾರಿಗೆ ವಿಭಾಗಗಳಿಗೆ 1.17 ಕೋಟಿ ರೂ. ನಷ್ಟ


ಚಿಕ್ಕೋಡಿ ಸಾರಿಗೆ ವಿಭಾಗದಲ್ಲಿ ಪ್ರತಿದಿನ 642 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತವೆ. ಮಂಗಳವಾರ ಕೇವಲ 60 ಬಸ್‌ಗಳು ಕೆಲ ಮಾರ್ಗಗಳಲ್ಲಿ ಸಂಚರಿಸಿವೆ. ಮಧ್ಯಾಹ್ನ 3.30ರ ನಂತರ ಬಸ್‌ ಸಂಚಾರ ಆರಂಭಿಸಲಾಗಿದೆ ಎಂದು ಬೆಳಗಾವಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ