ಆ್ಯಪ್ನಗರ

ಕಪಾಳಮೋಕ್ಷ ಮಾಡಿದರೆ 25 ಸಾವಿರ ರೂ. ಬಹುಮಾನ

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಕರಾಳ ದಿನಾಚರಣೆಯನ್ನು ...

Vijaya Karnataka 17 Oct 2018, 5:00 am
ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಕರಾಳ ದಿನಾಚರಣೆಯನ್ನು ಬೆಂಬಲಿಸುವ ಜನಪ್ರತಿನಿಧಿಗಳಿಗೆ ಕಪಾಳ ಮೋಕ್ಷ ಮಾಡುವ ಕನ್ನಡಿಗರಿಗೆ 25 ಸಾವಿರ ರೂ. ಬಹುಮಾನ ನೀಡುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Vijaya Karnataka Web BEL-16 LBS 2


ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ''ನಾಡವಿರೋಧಿ ಎಂಇಎಸ್‌ ಮುಖಂಡರು ಪ್ರತಿವರ್ಷ ಕರಾಳ ದಿನಾಚರಣೆ ಹೆಸರಲ್ಲಿ ಕನ್ನಡಿಗರ ಏಕತೆ ಮತ್ತು ಅಸ್ಮಿತೆ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯ ರಾಜಕಾರಣಿಗಳು ಮತಬ್ಯಾಂಕ್‌ ಗಟ್ಟಿಗೊಳಿಸುವ ಸಲುವಾಗಿ ಹಿಂಬಾಗಿಲಿನಿಂದ ಇಂಥ ಹೇಡಿಗಳಿಗೆ ಕೈಜೋಡಿಸುತ್ತಿದ್ದಾರೆ. ಈ ಬಾರಿ ರಾಜಕಾರಣಿಗಳು ಇಂತಹ ಹೀನ ಕೆಲಸಗಳಿಂದ ದೂರ ಉಳಿಯಬೇಕು. ಮತ್ತೆ ಬೆಂಬಲ ನೀಡಿದರೆ ವಿರೋಧಿಸಿ ಹೋರಾಟ ಮಾಡುತ್ತೇವೆ'', ಎಂದರು.

''ನ.1ರಂದು ಎಂಇಎಸ್‌ ಕರಾಳ ದಿನಾಚರಣೆಗೆ ಅವಕಾಶ ನೀಡದರೆ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ನಗರದಲ್ಲಿ ಬೃಹತ್‌ ಪ್ರಮಾಣದ ಒನಕೆ ಚಳವಳಿ ನಡೆಸಲಾಗುವುದು. ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತ ಮತ್ತು ಸರಕಾರವೇ ನೇರ ಹೊಣೆ'', ಎಂದು ಎಚ್ಚರಿಸಿದರು.

''ಸೋಮವಾರ ನಡೆದ ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿ ಎಂಇಎಸ್‌ ಬೆಂಬಲಿತ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇವರಿಗೆ ಕನ್ನಡಿಗರು ಯಾರೂ ಸಿಗಲಿಲ್ಲವೆ?'', ಎಂದು ಪ್ರಶ್ನಿಸಿದ ಅವರು, ''ಮುಂಬರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯಿಂದ 35 ವಾರ್ಡ್‌ಗಳಲ್ಲಿ ಸ್ಪರ್ಧೆ ಮಾಡುತ್ತೇವೆ'', ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಬಾಬು ಸಂಗೋಡಿ, ಗಿರೀಶ ಪೂಜಾರಿ, ಸುಷ್ಮಾ ಯಾದವಾಡ, ಆನಂದ, ನಾಗೇಶ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ