ಆ್ಯಪ್ನಗರ

ರೈಲು ನಿಲುಗಡೆ ರದ್ದು ವದಂತಿ; ಅಧಿಕಾರಿಗಳೊಂದಿಗೆ ಚರ್ಚೆ

ಕುಡಚಿ: ಚಿಂಚಲಿ ಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ರಾಣಿ ಚೆನ್ನಮ್ಮ ರೈಲನ್ನು ಚಿಂಚಲಿ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸುವುದನ್ನು ರದ್ದು ಪಡಿಸುತ್ತಾರೆನ್ನುವ ...

Vijaya Karnataka 27 Sep 2018, 5:00 am
ಕುಡಚಿ : ಚಿಂಚಲಿ ಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ರಾಣಿ ಚೆನ್ನಮ್ಮ ರೈಲನ್ನು ಚಿಂಚಲಿ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸುವುದನ್ನು ರದ್ದು ಪಡಿಸುತ್ತಾರೆನ್ನುವ ವದಂತಿ ಹರಡಿದ ಹಿನ್ನೆಲೆಯಲ್ಲಿ ಪಟ್ಟಣದ ಮುಖಂಡರು ಪಪಂ ಸದಸ್ಯರು ಸಾರ್ವಜನಿಕರು ರೈಲ್ವೇ ನಿಲ್ದಾಣಕ್ಕೆ ಬಂದು ವಿಚಾರಿಸಿ ಮಾಹಿತಿ ಪಡೆದುಕೊಂಡ ಘಟನೆ ಬುಧವಾರ ನಡೆುತು.
Vijaya Karnataka Web BEL-26KDC1


ಇನ್ನು ಮುಂದೆ ಚಿಂಚಲಿ ರೈಲ್ವೇ ನಿಲ್ದಾಣದಲ್ಲಿ ರಾಣಿ ಚೆನ್ನಮ್ಮ ರೈಲಿನ ನಿಲುಗಡೆಯನ್ನು ರದ್ದು ಪಡಿಸುವ ಸುದ್ದಿ ಸಾರ್ವಜನಿಕರಿಗೆ ಬಂದ ಹಿನ್ನೆಲೆಯಲ್ಲಿ ಪಟ್ಟಣದ ಹಿರಿಯ ಮುಖಂಡರು ಪಪಂ ಸದಸ್ಯರು ಸಾರ್ವಜನಿಕರು ರೈಲ್ವೇ ನಿಲ್ದಾಣಕ್ಕೆ ಬಂದು ರೈಲ್ವೇ ಅಧಿಕಾರಿಯನ್ನು ವಿಚಾರಿಸಿ ಈ ಬಗ್ಗೆ ಚರ್ಚೆ ನಡೆಸಿದರು. ಬಳಿಕ ರೈಲ್ವೇ ಅಧಿಕಾರಿಯು ಮಾತನಾಡಿ, ರಾಣಿಚೆನ್ನಮ್ಮ ರೈಲಿನ ನಿಲುಗಡೆ ರದ್ದತಿ ಕುರಿತು ಯಾವುದೇ ಪ್ರಸ್ತಾವ ಇಲ್ಲ. ಆದರೆ ಈ ನಿಲ್ದಾಣದಿಂದ ಪ್ರತಿ ತಿಂಗಳು ರೂ.10 ಸಾವಿರ ಆದಾಯ ಕಡಿಮೆಯಾಗುತ್ತಿದ್ದು ಟಿಕೆಟ್‌ ಮಾರಾಟ ಹೆಚ್ಚಿಸುವ ಕುರಿತು ಸರ್ವೇ ಕೈಗೊಳ್ಳಲಾಗುತ್ತಿದೆ ಅಷ್ಟೇ ಎಂದು ಸಮಜಾಯಿಶಿ ನೀಡಿದರು. ರೈಲ್ವೇ ಅಧಿಕಾರಿಯು ಸಾರ್ವಜನಿಕರಿಂದ ಪಟ್ಟಣದ ಸುತ್ತಲಿನ ಭೌಗೋಳಿಕ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಕದ್ದು ಜಾಧವ, ಶಂಕರ ಕರಾಡೆ, ರಾಜು ಜಾಧವ, ತಮ್ಮಾಣಿ ವಡ್ಡರ, ಸುನೀಲ ಧರ್ಮಣ್ಣವರ, ವಸಂತ ಕರಾಕಾಯಿ, ನವೀನ ಪಟ್ಟೇಕರಿ, ಡಾ.ಬಾಹುಬಲಿ ಕಾಸಾರ, ಡಾ.ಸಂಜಯ ಕೊಂಬೆಣ್ಣವರ, ರಾಜು ಶಿಂಧೆ, ಅನಿಲ ಕಾಂಬಳೆ, ರಮೇಶ ಹಾರೂಗೇರಿ, ಕುಮಾರ ಖೋತ, ಭೂಪಾಲ ನರಗಟ್ಟಿ ಹಾಗೂ ಮಾಯಕ್ಕಾದೇವಿ ದೇವಸ್ಥಾನ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ