ಆ್ಯಪ್ನಗರ

ಸದಲಗಾ: ಪುರಸಭೆ ವಾರ್ಡ್‌ ಚುನಾವಣೆಗೆ 7 ನಾಮಪತ್ರ ಸಲ್ಲಿಕೆ

ಯಕ್ಸಂಬಾ: ಸದಲಗಾ ಪಟ್ಟಣದ ಪುರಸಭೆ ವಾರ್ಡ್‌ 19ರ ಒಂದು ಸ್ಥಾನಕ್ಕೆ ಮೇ 16 ನಡೆಯಲಿರುವ ಉಪಚುನಾವಣೆಗಾಗಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಒಟ್ಟು ...

Vijaya Karnataka 17 May 2019, 5:00 am
ಯಕ್ಸಂಬಾ : ಸದಲಗಾ ಪಟ್ಟಣದ ಪುರಸಭೆ ವಾರ್ಡ್‌ 19ರ ಒಂದು ಸ್ಥಾನಕ್ಕೆ ಮೇ 16 ನಡೆಯಲಿರುವ ಉಪಚುನಾವಣೆಗಾಗಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ ಒಟ್ಟು ಐವರು ಅಭ್ಯರ್ಥಿಗಳಿಂದ 7 ನಾಮಪತ್ರಗಳು ಸಲ್ಲಿಕೆಯಾಗಿವೆ.
Vijaya Karnataka Web sadalaga 7 nominations filed for municipal ward byelections
ಸದಲಗಾ: ಪುರಸಭೆ ವಾರ್ಡ್‌ ಚುನಾವಣೆಗೆ 7 ನಾಮಪತ್ರ ಸಲ್ಲಿಕೆ


ಒಟ್ಟು ಸಲ್ಲಿಕೆಯಾದ 7 ನಾಮಪತ್ರಗಳಲ್ಲಿ ವಿಜಯಲಕ್ಷ್ಮೀ ನವಲೆ ಪಕ್ಷೇತರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ 2 ನಾಮಪತ್ರ, ಕಾವೇರಿ ಶಿಂಗೆ ಪಕ್ಷೇತರ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಎರಡು ನಾಮಪತ್ರ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಕೋಮಲ ನವಲೆ, ಸೌಜನ್ಯ ಡೊನವಾಡೆ, ಶಶಿಕಲಾ ಡೊನವಾಡೆ ತಲಾ ಒಂದು ನಾಮಪತ್ರ ಸೇರಿದಂತೆ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮೇ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 20 ಉಮೇದುವಾರಿಕೆ ಹಿಂಪಡೆಯುವ ಕೊನೆಯ ದಿನವಾಗಿದೆ. 29 ರಂದು ಅಗತ್ಯವಿದ್ದಲ್ಲಿ ಚುನಾವಣೆ ನಡೆಯಲಿದೆ.

ಪರಿಶಿಷ್ಟ ಜಾತಿ ಮಹಿಳೆಗಾಗಿ ಮೀಸಲಾತಿ ಹೊಂದಿದ ವಾರ್ಡ್‌ 19 ರಲ್ಲಿ 859 ಮತದಾರರಿದ್ದು ಒಂದು ಮತಗಟ್ಟೆ ಸಿದ್ಧಪಡಿಸಲಾಗಿದೆ. ಪುರಸಭೆ ಕಾಂಗ್ರೆಸ್‌ ಸದಸ್ಯರಾಗಿದ್ದ ಶೋಭಾ ನವಲೆ ನಿಧನದಿಂದ ತೆರವು ಕಂಡ ಸ್ಥಾನಕ್ಕಾಗಿ ಉಪಚುನಾವಣೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ