ಆ್ಯಪ್ನಗರ

ಸೈನಿಕ ಶಾಲೆ ಪ್ರವೇಶ ಪರೀಕ್ಷೆಯಲ್ಲಿ ಐವರಿಗೆ ಪ್ರತ್ಯೇಕ ವ್ಯವಸ್ಥೆ; ಬೆಳಗಾವಿಯಲ್ಲಿ ರೊಚ್ಚಿಗೆದ್ದ ಪಾಲಕರಿಂದ ಪ್ರತಿಭಟನೆ!

ಸೈನಿಕ ಶಾಲೆ ಪ್ರವೇಶಕ್ಕೆ ಭಾನುವಾರ ನಡೆದ ಪರೀಕ್ಷೆಯಲ್ಲಿ ಗೋಲ್​ಮಾಲ್ ನಡೆದಿದೆ ಎಂದು ಪೋಷಕರು ದೂರಿದ್ದಾರೆ. ಜೈನ್ ಹೆರಿಟೇಜ್ ಶಾಲೆಯಲ್ಲಿ ನಡೆಯುತ್ತಿದ್ದ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಸಾಮಾನ್ಯ ಮಕ್ಕಳಿಗೆ ಒಂದು ಕೊಠಡಿ ಹಾಗೂ ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ನಡೆಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka Web 10 Jan 2022, 11:04 am
ಬೆಳಗಾವಿ: ವಿಕೇಂಡ್ ಕರ್ಫ್ಯೂ ನಡುವೆಯೂ ಸೈನಿಕ ಶಾಲೆಯ ಪ್ರವೇಶಾತಿ ಪರೀಕ್ಷೆ ಆಯೋಜನೆ ಮಾಡಿದ್ದಲ್ಲದೆ, ಪರೀಕ್ಷಾ ಕೇಂದ್ರದಲ್ಲಿ ಜೈನ್ ಹೆರಿಟೇಜ್ ಶಾಲೆಯ ಆಡಳಿತ ಮಂಡಳಿ ಗೋಲ್‌ಮಾಲ್ ಮಾಡಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
Vijaya Karnataka Web ಪ್ರತಿಭಟನೆ


ಭಾನುವಾರ ನಗರದ ಮೂರನೇ ರೈಲ್ವೆ ಗೇಟ್ ಬಳಿ ಇರುವ ಜೈನ್ ಹೆರಿಟೇಜ್ ಶಾಲೆಯಲ್ಲಿ ನಡೆಯುತ್ತಿದ್ದ ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಸಾಮಾನ್ಯ ಮಕ್ಕಳಿಗೆ ಒಂದು ಕೊಠಡಿ ಹಾಗೂ ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ನಡೆಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೆ, ಪರೀಕ್ಷೆಯ ಸಮಯದ ಅವಧಿಗೂ ಮುನ್ನವೇ ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ಶೀಟ್ ನೀಡಿದ್ದಾರೆ ಎಂದು ಕೆಲ ವಿದ್ಯಾರ್ಥಿಗಳ ಪೋಷಕರು ಆರೋಪಿಸಿದರು. ಅಲ್ಲದೆ ಜೈನ್ ಹೆರಿಟೇಜ್ ಶಾಲಾ ಮಂಡಳಿಯ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ತಾರತಮ್ಯ ಮಾಡುತ್ತಿರುವುದು ಖಂಡಿಸಿ ಶಾಲೆಯ ಆವರಣದ ಹೊರಗಡೆ ಇದ್ದ ಪೋಷಕರು ಅಸಮಾಧಾನ ಹೊರ ಹಾಕಿ ಪರೀಕ್ಷಾ ಕೇಂದ್ರದ ಎದುರೇ ಪ್ರತಿಭಟನೆ ನಡೆಸಿದರು.
ಸ್ಕಾರ್ಫ್, ಕೇಸರಿ ಶಾಲು ವಿವಾದ ಹಾಗೂ ಮತೀಯ ರಾಜಕಾರಣದ ಒಳಸುಳಿಗಳು!
ಕಾಡಾ ಆಡಳಿತಾಧಿಕಾರಿ ಶಶಿಧರ ಕುರೇರ್ ಪುತ್ರಿ ಸೇರಿದಂತೆ ಐವರು ಸರಕಾರಿ ಅಧಿಕಾರಿಗಳ ಮಕ್ಕಳು ಸೈನಿಕ ಶಾಲೆಯ ಪರೀಕ್ಷೆಗೆ ಹಾಜರಾಗಿದ್ದರು. ಈ ಐದು ಜನ ಸರಕಾರಿ ಆಧಿಕಾರಿಗಳ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದರಿಂದ ಶಶಿಧರ ಕುರೇರ್ ಹಾಗೂ ಜೈನ್ ಹೆರಿಟೇಜ್ ಪ್ರಾಂಶುಪಾಲರ ವಿರುದ್ಧ ಪೋಷಕರು ತರಾಟೆಗೆ ತೆಗೆದುಕೊಂಡರು. ಪೋಷಕರ ಮಾಡುತ್ತಿರುವ ಆರೋಪವನ್ನು ಅಲ್ಲಗಳೆದ ಕೆಎಎಸ್ ಅಧಿಕಾರಿ ಶಶಿಧರ ಕುರೇರ್ ನನ್ನ ಮಗಳಿಗೆ ಕೋವಿಡ್ ಲಕ್ಷಣಗಳಿದ್ದವು. ಆದ್ದರಿಂದ ಕೋವಿಡ್ ಲಕ್ಷಣ ಇರುವವರಿಗಿದ್ದ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಿದ್ದರು. ಅದನ್ನು ಪಾಲಕರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಹೇಳಿದರೂ ಸಾಮಾನ್ಯ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳಲ್ಲಿ ಬೇಧ ಭಾವ ಮಾಡಬಾರದು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಹಿಗ್ಗಾಮುಗ್ಗಾ ಥಳಿತಕ್ಕೆ ಕಣ್ಣು ಕಳೆದುಕೊಂಡ ಕೂಡ್ಲಿಗಿಯ ವಿದ್ಯಾರ್ಥಿ : ಶಿಕ್ಷಕರ ವಿರುದ್ಧ ಕೇಸ್ ದಾಖಲು
ಸೈನಿಕ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಸರಕಾರಿ ಅಧಿಕಾರಿಗಳ ಮಕ್ಕಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಕಲ್ಪಿಸಿ ಸಾಮಾನ್ಯ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪರೀಕ್ಷಾಕೇಂದ್ರಕ್ಕೆ ಬಿಇಒ ವಿ.ಜೆ.ಭಜಂತ್ರಿ ಭೇಟಿ ನೀಡಿ ಇಬ್ಬರು ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಅನರ್ಹಗೊಳಿಸುವಂತೆ ಸೂಚಿಸಿದರು. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ ಇಬ್ಬರು ವಿದ್ಯಾರ್ಥಿಗಳನ್ನು ಅನರ್ಹಗೊಳಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ