ಆ್ಯಪ್ನಗರ

ಗಾಂಜಾ ಮಾರಾಟ: ನಾಲ್ವರ ಬಂಧನ

ನಾಲ್ವರ ಬಂಧನ ಸಿಇಎನ್‌ ಠಾಣೆ ಪೊಲೀಸರ ದಾಳಿ - 1...

Vijaya Karnataka 19 Jul 2018, 5:00 am
ಬೆಳಗಾವಿ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಗುಂಪಿನ ಮೇಲೆ ಬುಧವಾರ ದಾಳಿ ನಡೆಸಿದ ಸಿಇಎನ್‌ (ಸೈಬರ್‌, ಎಕನಾಮಿಕಲ್‌ ಆ್ಯಂಡ್‌ ನಾರ್ಕೋಟಿಕ್‌) ಠಾಣೆ ಪೊಲೀಸರು 1.5 ಕೆಜಿ ಗಾಂಜಾ ಸಮೇತ ನಾಲ್ವರನ್ನು ಬಂಧಿಸಿದ್ದಾರೆ.
Vijaya Karnataka Web sale of marijuana four arrested
ಗಾಂಜಾ ಮಾರಾಟ: ನಾಲ್ವರ ಬಂಧನ


ಗ್ಯಾಂಗ್‌ವಾಡಿಯ ಸರ್ಜು ಗೋವಿಂದ ಲೊಂಡೆ (30), ಅಶೋಕ ನಗರದ ನಿಖಾಬ ದಸ್ತಗೀರಸಾಬ್‌ ಪೀರಜಾದೆ, (38), ಟೋಪಿ ಗಲ್ಲಿಯ ತಬರೇಜ ಇಸ್ಮಾಯಿಲ್‌ ನರಗುಂದ (20) ಮತ್ತು ಕಲೈಗಾರ ಗಲ್ಲಿಯ ಶಾದಾಫ್‌ ಮಹ್ಮದಅಲಿ ಪೀರಜಾದೆ (28) ಬಂಧಿತರು.

ಮಾಳಮಾರುತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ಯಾಂಗ್‌ವಾಡಿಯ ದುರ್ಗಾದೇವಿ ದೇವಸ್ಥಾನ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಇವರು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುವಾಗ ಪೊಲೀಸರು ದಾಳಿ ನಡೆಸಿದ್ದಾರೆ. ಬೇರೆ ತಾಲೂಕುಗಳಿಂದ ಖರೀದಿ ಮಾಡಿ ತಂದ ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೇಟ್‌ ಮಾಡಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 1,700 ರೂ. ನಗದು ಸೇರಿದಂತೆ 16,700 ರೂ.ಮೌಲ್ಯದ 1.5 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಕಮಿಶನರ್‌ ಡಾ.ಡಿ.ಸಿ.ರಾಜಪ್ಪ, ಡಿಸಿಪಿಗಳಾದ ಸೀಮಾ ಲಾಟ್ಕರ್‌ ಮತ್ತು ಮಹಾನಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಸಿಇಎನ್‌ ಪಿಐ ಬಿ.ಆರ್‌.ಗಡ್ಡೇಕರ್‌, ಪಿಎಸ್‌ಐ ಜಯಶ್ರೀ ಮಾನೆ, ಸಿಬ್ಬಂದಿ ನಿಂಗಪ್ಪ ಮಾದರ, ಡಿ.ಎಚ್‌.ಮಾಳಗಿ ಸೇರಿದಂತೆ ಇತರರು ದಾಳಿ ನಡೆಸಿದ್ದರು.

ಮೊದಲ ಎಫ್‌ಐಆರ್‌: ಮಾದಕ ವಸ್ತು, ಸೈಬರ್‌, ಅಬಕಾರಿ, ಆರ್ಥಿಕ ವಂಚನೆಯಂತಹ ಪ್ರಕರಣಗಳ ತನಿಖೆಗೆ ಈಗಾಗಲೇ ಪ್ರತ್ಯೇಕ ಸೈಬರ್‌, ಎಕನಾಮಿಕಲ್‌ ಆ್ಯಂಡ್‌ ನಾರ್ಕೋಟಿಕ್‌ (ಸಿಇಎನ್‌) ಠಾಣೆ ತೆರೆಯಲಾಗಿದ್ದದರೂ ದಾಳಿ ನಡೆಸಿದ ನಂತರ ಅಪರಾಧ ನಡೆದ ಪ್ರದೇಶ ವ್ಯಾಪ್ತಿಯ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತಿತ್ತು. ಆದರೀಗ, ಕಳೆದೊಂದು ವಾರದಿಂದ ಸಿಇಎನ್‌ ಠಾಣೆಗೆ ಎಫ್‌ಐಆರ್‌ ದಾಖಲಿಸುವ ಅಧಿಕಾರವನ್ನು ನೀಡಲಾಗಿದ್ದು, ಸಿಸಿಬಿ ಪೊಲೀಸರನ್ನೊಳಗೊಂಡ ಸಿಇಎನ್‌ ಠಾಣೆ ಸಿಬ್ಬಂದಿಯೇ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ನಡೆದ ಗಾಂಜಾ ದಾಳಿ ಪ್ರಕರಣ ಸಿಇಎನ್‌ ಠಾಣೆಯಲ್ಲಿ ದಾಖಲಾದ ಮೊದಲ ಎಫ್‌ಐಆರ್‌ ಎನಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ