ಆ್ಯಪ್ನಗರ

ಗಾಂಜಾ ಮಾರಾಟ: ಓರ್ವನ ಬಂಧನ

ಗಾಂಜಾ ಮಾರುತ್ತಿದ್ದ ಅಬ್ದುಲ್‌ ರಜಾಕ ಸನದಿ (61) ಎಂಬಾತನನ್ನು ಬಂಧಿಸಿರುವ ಗೋಕಾಕ ನಗರ ಠಾಣೆ ಪೊಲೀಸರು, ಆತನಿಂದ 66 ಗ್ರಾಂ ಗಾಂಜಾ, ಒಂದು ಮೊಬೈಲ್‌ ಹಾಗೂ 2110 ರೂ...

Vijaya Karnataka 15 Jul 2018, 5:00 am
ಗೋಕಾಕ: ಗಾಂಜಾ ಮಾರುತ್ತಿದ್ದ ಅಬ್ದುಲ್‌ ರಜಾಕ ಸನದಿ (61) ಎಂಬಾತನನ್ನು ಬಂಧಿಸಿರುವ ಗೋಕಾಕ ನಗರ ಠಾಣೆ ಪೊಲೀಸರು, ಆತನಿಂದ 66 ಗ್ರಾಂ ಗಾಂಜಾ, ಒಂದು ಮೊಬೈಲ್‌ ಹಾಗೂ 2110 ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಶನಿವಾರ ಸಂಜೆ ನಗರದ ವಡ್ಡರಗಲ್ಲಿಯ ಲಕ್ಷ್ಮಿ ದೇವರ ಗುಡಿ ಹತ್ತಿರ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಿಪಿಐ ಎಂ.ಎಸ್‌. ತಾನಪ್ಪಗೋಳ, ಪಿಎಸ್‌ಐ ರಾಯಗೊಂಡ ಜಾನಾರ, ಸಿಬ್ಬಂದಿ ಬಿ.ವೈ.ನಾಯ್ಕರ, ಎ.ಎ. ಶ್ಯಾಂಡಗೆ, ಎಸ್‌.ಆರ್‌. ದೇಸಾಯಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಗೋಕಾಕದಲ್ಲಿ ಮಾದಕ ಪದಾರ್ಥಗಳ ರಾಜಾರೋಷ ಮಾರಾಟ ತಡೆಯಲು ಪೊಲೀಸರು ವಿಫಲರಾಗಿದ್ದಾರೆಂದು ಹಿಂದೂಪರ ಸಂಘಟನೆಗಳು ಈಚೆಗಷ್ಟೇ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Vijaya Karnataka Web BEL-IMG-20180714-WA0030

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ