ಆ್ಯಪ್ನಗರ

ಎಂಇಎಸ್‌ ಚೇಲಾಗಳಿಗೇ ಬುದ್ಧಿಹೇಳಿದ ರಾವತ್‌

ಬೆಳಗಾವಿ: 'ನಾಳೆ ಬೆಳಗಾವಿಗೆ ಬರುತ್ತೇನೆ, ಏನಾಗುತ್ತೋ ನೋಡೋಣ'ವೆಂದು ...

Vijaya Karnataka 19 Jan 2020, 5:00 am
ಬೆಳಗಾವಿ: 'ನಾಳೆ ಬೆಳಗಾವಿಗೆ ಬರುತ್ತೇನೆ, ಏನಾಗುತ್ತೋ ನೋಡೋಣ'ವೆಂದು ಶುಕ್ರವಾರ ಮಾಡಿದ್ದ ಟ್ವೀಟ್‌ನಲ್ಲಿಧಮ್ಕಿ, ಸವಾಲು ರೀತಿಯ ಭಾಷೆ ಬಳಕೆ ಮಾಡಿದ್ದ ಮುಂಬಯಿ ಶಿವಸೇನಾ ನಾಯಕ, ರಾಜ್ಯಸಭಾ ಸದಸ್ಯ ಸಂಜಯ ರಾವತ್‌ ಶನಿವಾರ ಬೆಳಗಾವಿಗೆ ಬಂದು ನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ, ಎಂಇಎಸ್‌ ಚೇಲಾಗಳಿಗೇ ಕಿವಿ ಹಿಂಡಿ ಬುದ್ಧಿ ಹೇಳಿ ಆಶ್ಚರ್ಯ ಮೂಡಿಸಿದರು.
Vijaya Karnataka Web sanjay raut taught lesson to mes workers
ಎಂಇಎಸ್‌ ಚೇಲಾಗಳಿಗೇ ಬುದ್ಧಿಹೇಳಿದ ರಾವತ್‌


ಇಲ್ಲಿನ ಕ್ಯಾಂಪ್‌ನ ಸ್ಕೂಲ್‌ ಆಫ್‌ ಕಲ್ಚರ್‌ ಸಭಾಭವನದಲ್ಲಿಸಾರ್ವಜನಿಕ ವಾಚನಾಲಯದವರು ಸಂಜೆ ಆಯೋಜಿಸಿದ್ದ ಕಾರ್ಯಕ್ರಮ ಮುಗಿದ ನಂತರ ಅದೇ ವೇದಿಕೆಯಲ್ಲಿಇಬ್ಬರು ಮರಾಠಿ ಭಾಷಿಕ ಪತ್ರಕರ್ತರು ನಡೆಸಿದ ಸಂವಾದಲ್ಲಿದೇಶದ ಪ್ರಚಲಿತ ರಾಜಕೀಯ, ಹಿಂದೂ-ಮುಸ್ಲಿಂ, ಎನ್‌ಆರ್‌ಸಿ, ಸಿಎಎ, ತಮ್ಮ ಪತ್ರಿಕಾ ವೃತ್ತಿಯ ಅನುಭವ, ಸುಪ್ರೀಂ ಕೋರ್ಟ್‌ನಲ್ಲಿರುವ ಗಡಿ ವಿವಾದ ಒಳಗೊಂಡು ಇತರೆ ವಿಷಯಗಳ ಕುರಿತು ಅವರು ಮಾತನಾಡಿದರು. ಎಂಇಎಸ್‌ ಗುಂಪುಗಾರಿಕೆ ಬಗ್ಗೆ ಛೀಮಾರಿ ಹಾಕಿದರು.

''ಈ ಮೊದಲು ಇಲ್ಲಿಂದ 6-7 ಶಾಸಕರು ಆಯ್ಕೆಯಾಗುತ್ತಿದ್ದಿರಿ. ಮಹಾರಾಷ್ಟ್ರಕ್ಕೆ ಬಂದಾಗ ಅದ್ಧೂರಿ ಸ್ವಾಗತ ಮತ್ತು ಸತ್ಕಾರ ಮಾಡುತ್ತಿದ್ದೆವು. ಈಗ ಒಬ್ಬರೂ ಶಾಸಕರು ಇಲ್ಲ. ನೀವೆಲ್ಲಒಂದಾಗಬೇಕು. ಹಕ್ಕುಗಳು ಮ್ಯಾವ್‌ ಮ್ಯಾವ್‌ ಎಂದರೆ ಸಿಗಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿಸಂಘರ್ಷ ಮಾಡಬೇಕು. ನಿಮ್ಮ ಹೋರಾಟಕ್ಕೆ ನಮ್ಮದು ಪೂರ್ಣ ಬೆಂಬಲವಿದೆ. ಗಡಿ ದಾವೆ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಮರಾಠಿ ಭಾಷಿಕರ ಹಿತ ಕಾಯಲು ಪ್ರಸಿದ್ಧ ನ್ಯಾಯವಾದಿ ಹರೀಶ್‌ ಸಾಳ್ವೆಯನ್ನು ನಿಯೋಜಿಸಲಾಗಿದ್ದು, ಬರುವ ನ್ಯಾಯ ತೀರ್ಪನ್ನು ಒಪ್ಪಿಕೊಳ್ಳೋಣ'', ಎಂದರು.

''ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ವಿಶ್ವಾಸಾರ್ಹ ಗಟ್ಟಿ ಸಂಬಂಧ ಹಾಗೂ ಗಡಿ, ಭಾಷೆ, ಸಾಂಸ್ಕೃತಿಕ ಸೌಹಾರ್ದ ಏರ್ಪಡಲು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆಗೆ ವ್ಯವಸ್ಥೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಎ.ಆರ್‌. ಅಂತುಳೆ ಮತ್ತು ಕರ್ನಾಟಕದ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ನಡುವೆ ಇಂಥ ಮಾತುಕತೆ ನಡೆದಿತ್ತು'', ಎಂದು ನೆನಪಿಸಿಕೊಂಡರು.

''ಭಾಷಾವಾರು ಪ್ರಾಂತ ರಚನೆ ಸಂದರ್ಭದಲ್ಲಿಅನೇಕ ವ್ಯತ್ಯಾಸಗಳು ಆಗಿವೆ. ಆಗಿನವರು ಹೆಚ್ಚು ಗಮನ ವಹಿಸದ್ದರಿಂದ ಸಮಸ್ಯೆ ಉಳಿದುಕೊಂಡು ಬಂದಿವೆ. ಮುಂಬಯಿ ಒಂದೇ ಆದರೂ ಅಲ್ಲಿಇಂಥ ಅನೇಕ ವೈರುಧ್ಯಗಳು ಇವೆ. ಏನೇ ಇದ್ದರೂ ಭಾರತ ಒಂದೇ ಎಂಬುದನ್ನು ಮರೆಯುವಂತಿಲ್ಲ'',ವೆಂದು ಪರೋಕ್ಷವಾಗಿ ಎಂಇಎಸ್‌ಗೆ ಕಿವಿಮಾತು ಹೇಳಿದರು.

ಪತ್ರಕರ್ತರಾದ ನರೇಂದ್ರ ಕೋಟೇಕರ್‌ ಮತ್ತು ಆನಂದ ಮೆಣಸೆ ಸಂವಾದ ನಡೆಸಿಕೊಟ್ಟರು. ಪೊಲೀಸ್‌ ಬಿಗಿ ಕಾವಲಿನಲ್ಲಿಕಾರ್ಯಕ್ರಮ ನಡೆಯಿತು. ಕನ್ನಡ ಕಾರ್ಯಕರ್ತರನ್ನು ದೂರ ಇಡಲಾಗಿತ್ತು. ಎಂಇಎಸ್‌ನ ಪ್ರಮುಖರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕರ್ನಾಟಕದವರು ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರದವರು ಕರ್ನಾಟಕದಲ್ಲಿಸಾಕಷ್ಟು ಸಾಧನೆ ಮಾಡಿದ್ದಾರೆ. ಗಂಗೂಬಾಯಿ ಹಾನಗಲ್ಲ, ಭೀಮಸೇನ ಜೋಶಿ, ಗಿರೀಶ್‌ ಕಾರ್ನಾಡ ಹಾಗೂ ಇತರರ ಕೊಡುಗೆಯನ್ನು ಮರಾಠಿಗರು ಮರೆಯುವಂತಿಲ್ಲ.
- ಸಂಜಯ್‌ ರಾವತ್‌, ಶಿವಸೇನಾ ನಾಯಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ