ಆ್ಯಪ್ನಗರ

ಸತೀಶ ಶುಗರ್ಸ್‌ ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್‌ ಆಯೋಜಿಸಿರುವ ಇಂತಹ ...

Vijaya Karnataka 19 Jan 2019, 5:00 am
ಗೋಕಾಕ: ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ದಿಶೆಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್‌ ಆಯೋಜಿಸಿರುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿವೆ ಎಂದು ಕಳೆದ ಸಾಲಿನ ಸತೀಶ ಶುಗರ್ಸ್‌ ಅವಾರ್ಡ್ಸ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿನಿ ರಕ್ಷಿತಾ ಮಿರ್ಜಿ ಹೇಳಿದರು.
Vijaya Karnataka Web BEL-18GOK1


ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್‌ ಪ್ರಾಯೋಜಕತ್ವದಲ್ಲಿ ಶುಕ್ರವಾರ ಆರಂಭಗೊಂಡ 18ನೇ ಸತೀಶ ಶುಗರ್ಸ್‌ ಅವಾರ್ಡ್ಸ್ ಅಂತಿಮ ಹಂತದ ಸಾಂಸ್ಕೃತಿಕ ಸ್ಪರ್ಧೆಗಳ ಮೂರು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ರಂಗಗಳಲ್ಲಿ ವಿದ್ಯಾರ್ಥಿ ಸಮುದಾಯವನ್ನು ಪ್ರೋತ್ಸಾಹಿಸುತ್ತಿರುವ ಶಾಸಕ, ಸಾಂಸ್ಕೃತಿಕ ಕಾರ್ಯಕ್ರಮದ ರೂವಾರಿ ಸತೀಶ ಜಾರಕಿಹೊಳಿಯವರ ಕಾರ್ಯ ಶ್ಲಾಘನೀಯ. ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಾ ಪ್ರತಿಭೆ ಗುರುತಿಸುವ ಉದ್ದೇಶದಿಂದ ಕಳೆದ 18 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸತೀಶ ಶುಗರ್ಸ್‌ ಅವಾರ್ಡ್ಸ್ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಇಡೀ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದರು.

ಚಿಕ್ಕೋಡಿ ಡಯಟ್‌ ಪ್ರಾಚಾರ್ಯ ಗಜಾನನ ಮನ್ನಿಕೇರಿ, ಮೂಡಲಗಿ ಕ್ಷೇತ್ರ ಶಿಕ್ಷ ಣಾಧಿಕಾರಿ ಅಜಿತ್‌ ಮನ್ನಿಕೇರಿ, ಎನ್‌ಎಸ್‌ಎಫ್‌ ಕಾರ್ಯದರ್ಶಿ ಎಸ್‌.ಎ. ರಾಮಗಾನಟ್ಟಿ, ಮಧ್ಯಾಹ್ನ ಬಿಸಿಯೂಟ ಶಿಕ್ಷ ಣಾಧಿಕಾರಿ ಡಿ.ಎಸ್‌. ಕುಲಕರ್ಣಿ, ಕಳೆದ ಸಾಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಾದ ಪುಷ್ಪಾ ಪಾಟೀಲ, ಅಮೃತಾ ಅರಬಾವಿ, ಐಶ್ವರ್ಯ ತಳವಾರ, ಮಹಾಲಕ್ಷ್ಮೀ ದೊಡಮನಿ, ಅಮೀತ ಕಲಾಲ, ನಿರಂಜನ ಕನಮಡ್ಡಿ, ಬಾಳಗೌಡ ಪಾಟೀಲ ಇದ್ದರು. ಭವ್ಯ ವೇದಿಕೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಜಾನಪದ ಗಾಯನ, ಸೋಲೋ ಡ್ಯಾನ್ಸ್‌, ಸಮೂಹ ನೃತ್ಯ ಜರುಗಿದವು. ಎ.ಜಿ. ಕೋಳಿ ಸ್ವಾಗತಿಸಿದರು. ಆರ್‌.ಎಲ್‌. ಮಿರ್ಜಿ ನಿರೂಪಿಸಿದರು. ಟಿ.ಬಿ. ಬಿಲ್ಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ