ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಕಾರಣದಿಂದ ಶಾಲೆಗಳಿಗೆ ನೀಡಿದ್ದ ರಜೆ ಅವಧಿಯ ಪಠ್ಯಕ್ರಮವನ್ನು ಸರಿದೂಗಿಸುವ ಉದ್ದೇಶದಿಂದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಶನಿವಾರ, ಭಾನುವಾರಗಳಂದು ಶಾಲೆ ನಡೆಸುವಂತೆ ಎರಡೂ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಆ.17, 18, 24, 25, 31 ಹಾಗೂ ಸೆ.7, 8, 14, 21ರ ಶನಿವಾರ ಮತ್ತು ಭಾನುವಾರ ಪೂರ್ಣ ದಿನ ಶಾಲೆ ನಡೆಸಿ ಬೋಧನಾ ಕಲಿಕೆ ಸರಿದೂಗಿಸುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. ಧಾರಾಕಾರ ಮಳೆ ಕಾರಣದಿಂದ ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಜು.31 ಮತ್ತು ಆ.6 ರಿಂದ 10ರವರೆಗೆ ಒಟ್ಟು ಆರು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಶನಿವಾರ, ಭಾನುವಾರ ಪೂರ್ಣ ದಿನ ಶಾಲೆ
ಬೆಳಗಾವಿ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಕಾರಣದಿಂದ ...
Vijaya Karnataka 17 Aug 2019, 5:00 am