ಆ್ಯಪ್ನಗರ

ಮಹಿಳಾ ಪತ್ತಿನ ಸಂಘದ ಕಾರ‍್ಯದರ್ಶಿ ಬಂಧನ

ಗೋಕಾಕ: ಠೇವಣಿ ಮರುಪಾವತಿಸದ ಶ್ರೀ ರೇಣುಕಾಚಾರ್ಯ ಮಹಿಳಾ ಪತ್ತಿನ ಸಂಘದ ...

Vijaya Karnataka 15 Mar 2019, 5:00 am
ಗೋಕಾಕ : ಠೇವಣಿ ಮರುಪಾವತಿಸದ ಶ್ರೀ ರೇಣುಕಾಚಾರ್ಯ ಮಹಿಳಾ ಪತ್ತಿನ ಸಂಘದ ವಿರುದ್ಧ ಗೋಕಾಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿ ಚನ್ನಬಸಯ್ಯ ಯೋಗಿಕೊಳ್ಳಮಠ ಅವರನ್ನು ಬಂಧಿಸಲಾಗಿದೆ.
Vijaya Karnataka Web BEL-14GOK1


ಸಹಕಾರಿ ಸಂಘಗಳ ನಿರೀಕ್ಷ ಕ ಎಸ್‌.ಬಿ. ಬಿರಾದರ ಪಾಟೀಲ ಅವರು ಸಂಘದ ನಿರ್ದೇಶಕರು ಸೇರಿದಂತೆ 12 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ನಗರದ ಸೋಮವಾರ ಪೇಟೆಯಲ್ಲಿ ಇರುವ ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಿಳಾ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಸಹಕಾರಿ ಸಂಘದ ಕೋಟ್ಯಂತರ ರೂ. ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಲಾಗಿದೆ.

ಶಿವಲೀಲಾ ಹಿರೇಮಠ, ಸುಮಂಗಲಾ ಹಿರೇಮಠ, ಶಾಂತಾದೇವಿ ಕಂಬಿ, ಗೀತಾ ನೇಗಿನಾಳ, ಶಕುಂತಲಾ ಹಾಲಭಾಂವಿ, ವಿದ್ಯಾ ಶೆಟ್ಟಿ, ಪದ್ಮಾವತಿ ಹರಿಜನ ಹಾಗೂ ಪಿಗ್ಮಿ ಏಜಂಟನಾದ ಶಂಕರ ಫಕೀರಪೂರ ಅವರ ಮೇಲೆ ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ, ಸಂಘದ ಕಾರ್ಯದರ್ಶಿ ಚನ್ನಬಸಯ್ಯ ಯೋಗಿಕೊಳ್ಳಮಠನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಸಂಘದಲ್ಲಿ ಠೇವಣಿ ಇರಿಸಿದ ನೂರಾರು ಗ್ರಾಹಕರು ಗೋಕಾಕ ಹಾಗೂ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು. ಗ್ರಾಹಕರ ನ್ಯಾಯಾಲಯ ಸಂಘದ ನಿರ್ದೇಶಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಎರಡು ದಿನಗಳ ಹಿಂದೆ ಆದೇಶಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ