ಬೆಳಗಾವಿ: ಮನೆಯಿಂದ ಹೊರಹೋದ ವೃದ್ಧ ನಾಪತ್ತೆಯಾಗಿರುವ ಕುರಿತು ನಗರದ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ. ಅನಗೋಳ ಶಿವಶಕ್ತಿ ನಗರದ ನಿವಾಸಿ ಶಂಕರ ಸದು ಜೋಶಿ(76) ಕಾಣೆಯಾದ ವೃದ್ಧ. ಜೂ. 8ರಂದು ಬೆಳಗ್ಗೆ 11ಗಂಟೆಗೆ ವಾಯುವಿಹಾರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಂಕರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾಪತ್ತೆಯಾದ ವ್ಯಕ್ತಿ 5.5 ಅಡಿ ಎತ್ತರ, ಗೋದಿಗೆಂಪು ಮೈಬಣ್ಣ, ಉದ್ದ ಮುಖ ಹೊಂದಿದ್ದಾರೆ. ಇಂತಹ ಹೊಲಿಕೆವುಳ್ಳ ವ್ಯಕ್ತಿ ಕಂಡು ಬಂದಲ್ಲಿ ಉದ್ಯಮಬಾಗ ಪೊಲೀಸ್ ಠಾಣೆ ಅಥವಾ ದೂರವಾಣಿ 0831-2405238 ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.
ವೃದ್ಧ ನಾಪತ್ತೆ; ದೂರು ದಾಖಲು
ಮನೆಯಿಂದ ಹೊರಹೋದ ವೃದ್ಧ ನಾಪತ್ತೆಯಾಗಿರುವ ಕುರಿತು ನಗರದ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಾಗಿದೆ...
Vijaya Karnataka 10 Jun 2019, 5:00 am