ಆ್ಯಪ್ನಗರ

ಹಿರಿಯ ನಾಗರಿಕರ ಹುಟ್ಟು ಹಬ್ಬ ಆಚರಣೆ

ಬೆಳಗಾವಿ: ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅಗತ್ಯವಿದ್ದು ಹಿರಿಯ ನಾಗರಿಕರು ತಮ್ಮ ಸೇವಾ ನಿವೃತ್ತಿ ನಂತರ ಆತ್ಮ ವಿಶ್ವಾಸ ಕಳೆದುಕೊಳ್ಳದೆ ಕ್ರಿಯಾಶೀಲತೆಯಿಂದ ...

Vijaya Karnataka 1 Jun 2018, 5:00 am
ಬೆಳಗಾವಿ: ಯುವ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅಗತ್ಯವಿದ್ದು ಹಿರಿಯ ನಾಗರಿಕರು ತಮ್ಮ ಸೇವಾ ನಿವೃತ್ತಿ ನಂತರ ಆತ್ಮ ವಿಶ್ವಾಸ ಕಳೆದುಕೊಳ್ಳದೆ ಕ್ರಿಯಾಶೀಲತೆಯಿಂದ ಜೀವನವನ್ನು ಕಳೆಯುತ್ತ ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಶ್ರೀಕಾಂತ ಹೀರೆಮಠ ಹೇಳಿದರು.
Vijaya Karnataka Web BEL-31LBS3


ಅವರು ಶ್ರೀನಗರದ ಗುರು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಶಿವಲಿಂಗೇಶ್ವರ ಶಿಕ್ಷ ಣ ಸಂಸ್ಥೆ, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಹುಟ್ಟು ಹಬ್ಬ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಕೇಂದ್ರದ ಸದಸ್ಯ ಎಂ.ಐ. ಬೇವೂರ, ಕೆ.ಬಿ. ನೋಗಿನಾಳ, ಸಿ.ಆರ್‌. ದೇಶನೂರ, ಎಸ್‌.ಡಿ. ಬೆಣ್ಣಿ, ಎಂ.ಎನ್‌. ಪೂಜಾರ, ಎಸ್‌.ಎಸ್‌. ನಾಯ್ಕರ, ಎಸ್‌.ಎಂ. ಬೋಜ, ಜೆ.ಬಿ. ತೇರದಾಳ, ಎಸ್‌.ಎಸ್‌. ಸುಬೇದಾರ, ಬಿ.ಬಿ. ದೊಡ್ಡಲಿಂಗಪ್ಪಗೊಳ, ಎಸ್‌.ಎನ್‌. ಪವಾಡೆಪ್ಪನವರ, ಕೆ.ಜಿ. ಪತ್ತಾರ ಹಾಗೂ ಎಂ.ಹೆಚ್‌. ಖಾನಾಪುರ ಅವರ ಹುಟ್ಟು ಹಬ್ಬ ಆಚರಿಸಲಾಯಿತು.

ಬಿ.ಎಚ್‌ ಮೂಡಿ, ಮಹಾವೀರ ಘುಳಣ್ಣವರ, ಸುನೀತಾ ಹಿರೇಮಠ, ಪರಶುರಾಮ ಗುರಪ್ಪಗೋಳ, ಶೇವಂತಾ ಡೊಂಗರೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ