ಆ್ಯಪ್ನಗರ

ಖಾನಾಪುರದಲ್ಲಿ ಸರಣಿ ಕಳ್ಳತನ

ಖಾನಾಪುರ: ಪಟ್ಟಣದ ಜನನಿಬಿಡ ಮಾರುಕಟ್ಟೆ ...

Vijaya Karnataka 8 Jan 2020, 5:00 am
ಖಾನಾಪುರ: ಪಟ್ಟಣದ ಜನನಿಬಿಡ ಮಾರುಕಟ್ಟೆ ಪ್ರದೇಶದ ಐದು ವಾಣಿಜ್ಯ ಮಳಿಗೆಗಳಿಗೆ ಕನ್ನ ಹಾಕಿದ ಕಳ್ಳರು ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿದ್ದಾರೆ.
Vijaya Karnataka Web series of theft in khanapur
ಖಾನಾಪುರದಲ್ಲಿ ಸರಣಿ ಕಳ್ಳತನ


ಪಟ್ಟಣದ ಬೆಳಗಾವಿ ರಸ್ತೆಯ ಕಾವೇರಿ ಹೋಟೆಲ್‌, ರೇಣುಕಾ ಹೋಟೆಲ್‌, ಈ ಹೋಟೆಲ್‌ ಮುಂದಿನ ಪಾನ್‌ ಶಾಪ್‌ಗಳು ಮತ್ತು ಜಾಂಬೋಟಿ ವೃತ್ತದಲ್ಲಿರುವ ಒಂದು ಮೊಬೈಲ್‌ ಅಂಗಡಿಗಳ ಚಾವಣಿ ಮುರಿದು ಒಳನುಗ್ಗಿದ ಕಳ್ಳರು ಅಂದಾಜು 60 ಸಾವಿರ ನಗದು, ಮೊಬೈಲ್‌, ದಿನಸಿ ಪದಾರ್ಥಗಳು, ತಂಪು ಪಾನೀಯಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಪೊಲೀಸ್‌ ಠಾಣೆಯಿಂದ ಹಲವೇ ಮೀಟರ್‌ ಅಂತರದಲ್ಲಿರುವ ಮತ್ತು ಪಟ್ಟಣದ ಪ್ರಮುಖ ಹೆದ್ದಾರಿ ಪಕ್ಕದ ವಾಣಿಜ್ಯ ಮಳಿಗೆಗಳಲ್ಲಿನಡೆದ ಈ ಘಟನೆಯಿಂದಾಗಿ ನಾಗರಿಕರು ಆತಂಕಗೊಂಡಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹಚ್ಚಬೇಕು ಮತ್ತು ಈಗಿರುವ ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಿ ಕಳ್ಳತನ ಪ್ರಕರಣಗಳನ್ನು ತಡೆಯಬೇಕು ಎಂದು ಸ್ಥಳೀಯ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ