ಆ್ಯಪ್ನಗರ

ಪೇಜಾವರ ಶ್ರೀಗಳ ವಿರುದ್ಧ ದುರುದ್ದೇಶದ ಆರೋಪ

ರಾಜಕಾರಣಿ ಎ.ಕೆ. ಸುಬ್ಬಯ್ಯ ಪೇಜಾವರ ಶ್ರೀಗಳ ವಿರದ್ಧ ಮಾಡಿರುವ ಆರೋಪ ಸರಿಯಲ್ಲ. ಅವರು ತಕ್ಷಣ ಕ್ಷಮೆ ಕೇಳಬೇಕು ಎಂದು ಬೆಳಗಾವಿಯ ವಿದ್ಯಾ ವಿಹಾರ ವಿದ್ಯಾಲಯ ಸಂಸ್ಥೆ ಕುಲಪತಿ ಎನ್‌.ಆರ್‌. ವಿಜಯೀಂದ್ರ ಶರ್ಮ ಆಗ್ರಹಿಸಿದರು.

Vijaya Karnataka Web 8 Aug 2018, 8:30 pm
ಬೆಳಗಾವಿ : ಶಿರೂರ ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೇಜಾವರ ಸ್ವಾಮೀಜಿ ವಿರುದ್ಧ ರಾಜಕಾರಣಿ ಎ.ಕೆ. ಸುಬ್ಬಯ್ಯ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸುಬ್ಬಯ್ಯ ಕ್ಷಮೆ ಕೇಳಬೇಕು ಎಂದು ಬೆಳಗಾವಿಯ ವಿದ್ಯಾ ವಿಹಾರ ವಿದ್ಯಾಲಯ ಸಂಸ್ಥೆ ಕುಲಪತಿ ಎನ್‌.ಆರ್‌. ವಿಜಯೀಂದ್ರ ಶರ್ಮ ಆಗ್ರಹಿಸಿದರು.
Vijaya Karnataka Web pejavara


ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೇಜಾವರ ಶ್ರೀಗಳ ವಿರುದ್ಧ ದಾಖಲೆ ರಹಿತ ಆರೋಪ ಮಾಡುವುದು ಸರಿಯಲ್ಲ. ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸ್ವಾಮೀಜಿ ತಪ್ಪಿತಸ್ಥರು ಎಂದಾದರೆ ಬಂಧಿಸಲಿ. ಅವಜಹೇಳನಕಾರಿ ಹೇಳಿಕೆ ನೀಡಿದ ಸುಬ್ಬಯ್ಯ ವಿರುದ್ಧ ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು ಆಗ್ರಹಿಸಿದರು.

ಉದ್ಯಮಿ ಅನಿಲ ಪೋತದಾರ ಮಾತನಾಡಿ, ಕೆಲವರು ಪೇಜಾವರ ಸ್ವಾಮೀಜಿ ಮತ್ತು ಬ್ರಾಹ್ಮಣ ಸಮುದಾಯದ ವಿರುದ್ಧ ಉದ್ದೇಶಪೂರ್ವಕ ಹಾಗೂ ವೈಯಕ್ತಿಕ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಬ್ರಾಹ್ಮಣ ಸಮುದಾಯದವರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಮೇಲೆ ನಡೆಯುತ್ತಿರುವ ಅನ್ಯಾಯದ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಸರಕಾರ ಕ್ರಮಕ್ಕೆ ಮುಂದಾಗಿಲ್ಲ. ಸ್ವಾಮೀಜಿ ವಿರುದ್ಧ ಆರೋಪ ಮಾಡುತ್ತಿರುವವರ ಮೇಲೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಕ್ರಮ ಕೈಗೊಳ್ಳಬೇಕು ಎಂದು ಪೋತದಾರ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ