ಆ್ಯಪ್ನಗರ

ಕೈಕೊಟ್ಟ ಸರ್ವರ್‌ : ಬ್ಯಾಂಕ್‌ ಗ್ರಾಹಕರ ಪರದಾಟ

ಬಾವನಸೌಂದತ್ತಿ: ನಾಲ್ಕು ದಿನಗಳಿಂದ ಗ್ರಾಮದ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸರ್ವರ್‌ ಸಮಸ್ಯೆಯಿಂದ ನೂರಾರು ಗ್ರಾಹಕರು ...

Vijaya Karnataka 27 Jun 2018, 5:00 am
ಬಾವನಸೌಂದತ್ತಿ: ನಾಲ್ಕು ದಿನಗಳಿಂದ ಗ್ರಾಮದ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸರ್ವರ್‌ ಸಮಸ್ಯೆಯಿಂದ ನೂರಾರು ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web BEL-26BSDT1A


ಗ್ರಾಮದ ಬ್ಯಾಂಕಿಗೆ ದಿನ ನಿತ್ಯ ದಿಗ್ಗೇವಾಡಿ, ನಸಲಾಪುರ, ಯಡ್ರಾವ ಗ್ರಾಮಗಳಿಂದ ನೂರಾರು ಗ್ರಾಹಕರು ಬರುತ್ತಾರೆ. ಆದರೆ ಕಳೆದೊಂದು ವಾರದಿಂದ ಸರ್ವರ್‌ ಸಮಸ್ಯೆಯಿಂದ ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸಾಗುತ್ತಿದ್ದಾರೆ. ಸಾರ್ವಜನಿಕರು ಸಹನೆಯಿಂದ ಒಂದು ವಾರ ಕಾಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ನಡೆಯುವ ಅದೇ ರಾಗ, ಅದೇ ಹಾಡು ಮುಂದುವರಿದಿದೆ. ಸರ್ವರ್‌ ಸಮಸ್ಯೆಯಿಂದ ನೆಫ್ಟ್‌, ಆರ್ಟಿಜಿಎಸ್‌, ಡಿಪಾಜಿಟ್‌, ಸೇವಿಂಗ್ಸ್‌, ಪೆನ್ಷನ್‌ ವಿತರಣೆ ಸೇರಿದಂತೆ ಹಲವು ಪ್ರಕ್ರಿಯೆಗಳು ನಿಂತು ಹೋಗಿವೆ.

ದಿಗ್ಗೇವಾಡಿ ಮಾರ್ಗದಿಂದ ಬಾವನಸೌದತ್ತಿವರೆಗೆ ಬಿಎಸ್‌ಎನ್‌ಎಲ್‌ ಕೇಬಲ್‌ ಅಳವಡಿಸಲಾಗಿದೆ. ಮಧ್ಯದಲ್ಲಿ ಸಾಕಷ್ಟು ಕೇಬಲ್‌ ತುಂಡಾಗಿದ್ದರಿಂದ ಸಿಂಡಿಕೇಟ್‌ ಬ್ಯಾಂಕ್‌ ಸೇರಿದಂತೆ ಹಲವು ಕಚೇರಿಯಲ್ಲಿನ ಕೆಲಸಗಳು ಸ್ಥಗಿತಗೊಳ್ಳುತ್ತಿವೆ. ಹೊಸ ಕೇಬಲ್‌ ಅಳವಡಿಸಬೇಕು ಎಂದು ಸಂಬಂಧಪಟ್ಟವರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಒಂದು ವಾರದಿಂದ ಸರ್ವರ್‌ ಬಿಜಿ ಇದೆ ಎಂದು ಹೇಳುತ್ತಿದ್ದಾರೆ. ಹಣ ತೆಗೆದುಕೊಳ್ಳಲು ಒಂದು ವಾರದಿಂದ ಬರುತ್ತಿದ್ದೇವೆ. ಸಿಗುತ್ತಿಲ್ಲ. ಇದರಿಂದ ಬಹಳ ತೊಂದರೆಯಾಗುತ್ತಿದೆ.
-ಅಶೋಕ ಭಿಷ್ಟೆ, ಗ್ರಾಹಕ.

ರೈತರು ಪೈಪ್‌ಲೈನ್‌ ಅಳವಡಿಸಿಕೊಳ್ಳುವಾಗ ಬಿಎಸ್‌ಎನ್‌ಎಲ್‌ ಲೈನ್‌ ತುಂಡು ಮಾಡುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಇನ್ನೆರಡು ದಿನದಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.
-ಅರುಣ ಅಂದಾನಿ, ಜೆಟಿಒ, ಬಿಎಸ್‌ಎನ್‌ಎಲ್‌ ರಾಯಬಾಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ