ಆ್ಯಪ್ನಗರ

ಪಕ್ಷೇತರ ಸ್ಪರ್ಧೆಗೆ ಸಿದ್ಧರಾದ ಶಹಜಾನ್‌ ಡೊಂಗರಗಾಂವ್‌

ಬೆಳಗಾವಿ/ಅಥಣಿ: ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಶಹಜಾನ ಡೊಂಗರಗಾಂವ್‌ ...

Vijaya Karnataka 17 Nov 2019, 5:00 am
ಬೆಳಗಾವಿ/ಅಥಣಿ: ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಸಹಜಾನ ಡೊಂಗರಗಾಂವ್‌ ಅವರು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿಪಕ್ಷೇತರ ಸ್ಪರ್ಧೆಗೆ ಸಿದ್ಧರಾಗಿದ್ದಾರೆ.
Vijaya Karnataka Web 16ATHANI2061609
ಅಥಣಿ ಮತಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ನಾಮಪತ್ರ ಸಲ್ಲಿಸಿದರು.


ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಯಾಗಿದ್ದ ಅವರು ನಾಮಪತ್ರ ಸಲ್ಲಿಕೆಗೆ ಒಂದೇ ದಿನ ಬಾಕಿ ಇದ್ದರೂ ಅಭ್ಯರ್ಥಿ ಘೋಷಣೆಯಾಗದ ಹಿನ್ನೆಲೆಯಲ್ಲಿಶನಿವಾರ ಕಾಂಗ್ರೆಸ್‌ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಆ ಮೂಲಕ ಟಿಕೆಟ್‌ಗಾಗಿ ಕಾಂಗ್ರೆಸ್‌ ನಾಯಕರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

''ನನಗೇ ಟಿಕೆಟ್‌ ಸಿಗುವ ಭರವಸೆ ಇದೆ. ಅದನ್ನು ಬಿಟ್ಟು ದುರ್ಬಲ ಅಥವಾ ಬೇರೆ ತಾಲೂಕಿನ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಬೆಂಬಲಿಗರ ಅನಿಸಿಕೆ ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಯೋಗ್ಯ ವ್ಯಕ್ತಿಗೆ ಟಿಕೆಟ್‌ ನೀಡಿದರೆ ನಾಮಪತ್ರ ವಾಪಸ್‌ ಪಡೆಯುತ್ತೇನೆ. ಪಕ್ಷೇತರ ಸ್ಪರ್ಧಿಸುವ ಅನಿವಾರ್ಯತೆ ಎದುರಾದರೆ ಅದೇ ರೀತಿ ನಡೆದುಕೊಳ್ಳಲು ಮುಂಜಾಗೃತೆಯಾಗಿ ನಾಮಪತ್ರ ಸಲ್ಲಿಸಿದ್ದೇನೆ'' ಎಂದು 'ವಿಕ'ಕ್ಕೆ ತಿಳಿಸಿದ್ದಾರೆ.

ಶಹಜಾನ್‌ ಡೊಂಗರಗಾಂವ್‌ ಅವರು 1999ರಲ್ಲಿಅಥಣಿ ಕ್ಷೇತ್ರದಲ್ಲಿಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ
ಶನಿವಾರ ಕಾಗವಾಡದಲ್ಲಿ1, ಅಥಣಿ-3, ಗೋಕಾಕದಲ್ಲಿ2 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ರಮೇಶ ಜಾರಕಿಹೊಳಿ, ರಾಜು ಕಾಗೆ, ಶ್ರೀಮಂತ ಪಾಟೀಲ್‌, ಮಹೇಶ ಕುಮಟಳ್ಳಿ ಸೇರಿದಂತೆ ಕಾಂಗ್ರೆಸ್‌, ಬಿಜೆಪಿಯ ಎಲ್ಲಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ನನ್ನನ್ನು ಬಿಟ್ಟು ಸಂಬಂಧವಿಲ್ಲದ ಅಭ್ಯರ್ಥಿಗೆ ಟಿಕೆಟ್‌ ಕೊಡುವುದಕ್ಕೆ ಆಕ್ಷೇಪವಿದೆ. ಯೋಗ್ಯ ಅಭ್ಯರ್ಥಿ ಅಥವಾ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಅವರಿಗೆ ಟಿಕೆಟ್‌ ಕೊಟ್ಟರೆ ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಇಲ್ಲದಿದ್ದರೆ ಸಂದರ್ಭ ನೋಡಿ ಪಕ್ಷೇತರ ಸ್ಪರ್ಧೆಗೂ ಸಿದ್ಧನಿದ್ದೇನೆ.
- ಶಹಜಾನ್‌ ಡೊಂಗರಗಾಂವ್‌, ಮಾಜಿ ಶಾಸಕ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ