ಆ್ಯಪ್ನಗರ

ಚಿನ್ಮಯ ಸಾಗರ ಮುನಿಶ್ರೀ ದರ್ಶನ ಪಡೆದ ಸಚಿವೆ ಶಶಿಕಲಾ ಜೊಲ್ಲೆ

ಕಾಗವಾಡ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ...

Vijaya Karnataka 15 Oct 2019, 5:00 am
ಕಾಗವಾಡ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಅವರು ಜುಗೂಳ ಗ್ರಾಮದಲ್ಲಿ ಯಮಸಲ್ಲೇಖನ ವ್ರತ ನಿರತ ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರನ್ನು ಸೋಮವಾರ ಭೇಟಿಯಾಗಿ ದರ್ಶನಾಶೀರ್ವಾದ ಪಡೆದರು.
Vijaya Karnataka Web 14 KAGWAD 5 NEWS PHOTO_53


ಈ ವೇಳೆ ಮಾತನಾಡಿದ ಅವರು, 'ಜಂಗಲ್‌ವಾಲೇ ಬಾಬಾ' ಎಂದೇ ಖ್ಯಾತರಾದ ಅವರು, ದೇಶಾದ್ಯಂತ ಬರಿಗಾಲಿನಿಂದ ಪಾದಯಾತ್ರೆ ಮಾಡುತ್ತಾ ಅಹಿಂಸಾ ತತ್ವಗಳೊಂದಿಗೆ ಯುವಕರ ದುಷ್ಟ ಚಟಗಳನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ಇದನ್ನು ಕಂಡು ವಿದೇಶದಿಂದ ಡಾಕ್ಟರೇಟ್‌ ಪದವಿ ನೀಡಿ ಸನ್ಮಾನಿಸಿರುವುದು ನಮ್ಮೇಲ್ಲರ ಭಾಗ್ಯ. ಇಂತಹ ಸಂತರ ಅವಶ್ಯಕತೆ ದೇಶಕ್ಕಿದೆ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆಸಹ ಶ್ರೀಗಳ ದರ್ಶನ ಪಡೆದು ಜುಗೂಳ ಗ್ರಾಮದಲ್ಲಿಶ್ರೀಗಲ ಹೆಸರಿನಲ್ಲಿನಿರ್ಮಿಸುವ ಸ್ಮಾರಕಕ್ಕೆ ಸಂಸದರ ನಿಧಿಯಿಂದ ಸಹಾಯ ನೀಡುವುದಾಗಿ ತಿಳಿಸಿದರು.

ಬೆಳಗಾವಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ದಕ್ಷಿಣ ಭಾರತ ಜೈನ ಸಭೆಯ ರಾವಸಾಹೇಬ ಪಾಟೀಲ, ವಿಧಾನ ಪರಿಷತ್‌ ಸದಸ್ಯ ವಿವೇಕರಾವ ಪಾಟೀಲ ಮಾತನಾಡಿದರು.

ಸದಲಗಾ ಆಶ್ರಮದ ಡಾ. ಶ್ರದ್ಧಾನಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಕಾಗವಾಡ ಜಿಪಂ ಸದಸ್ಯ ಅಜಿತ್‌ ಚೌಗುಲೆ, ಸೇರಿದಂತೆ ಸಾವಿರಾರು ಭಕ್ತರು ಮಹಾರಾಜರ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ