ಆ್ಯಪ್ನಗರ

ಶಿವಸೇನೆ ಉದ್ಧಟತನಕ್ಕೆ ಖಂಡನೆ

ಮೂಡಲಗಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ...

Vijaya Karnataka 31 Dec 2019, 5:00 am
ಮೂಡಲಗಿ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೆ ಶಿವಸೇನೆ ಹಾಗೂ ಎಂಇಎಸ್‌ ಉದ್ಧಟತನ ತೋರಿವೆ. ಈ ಪಕ್ಷದವರು ಕೊಲ್ಲಾಪುರದಲ್ಲಿಕರ್ನಾಟಕದ ನಾಡಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವುದು ಖಂಡನೀಯ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ತಾಲೂಕು ಅಧ್ಯಕ್ಷ ಸಚಿನ್‌ ಲಂಕೆನ್ನವರ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web 30MDL1_53
ಶಿವಸೇನೆ ಹಾಗೂ ಎಂಇಎಸ್‌ ಉದ್ಧಟತನ ಖಂಡಿಸಿ ಮೂಡಲಗಿಯಲ್ಲಿಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಶಿವಸೇನೆಯ ಪುಂಡಾಟಿಕೆ ವಿರೋಧಿಸಿ ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನಡೆಸಿದ ಪ್ರತಿಭಟನೆಯಲ್ಲಿಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಪ್ರತಿಕೃತಿ ದಹಿಸಿ ಅವರು ಮಾತನಾಡಿದರು. ಮಲ್ಲಪ್ಪ ಮದಗುಣಕಿ, ಉಮೇಶ ಬೆಳಕೂಡ, ಸಾವಂತ ಹೊಸಮನಿ, ಭರತರಾಜ ಪಾಟೀಲ, ಮಹಾಂತೇಶ ಮುಗಳಖೋಡ, ಸುರೇಶ ಪಾಟೀಲ, ರಾಜು ತಳವಾರ, ತುಕಾರಾಮ ಕುಲಗೋಡ, ಬಸು ಕಾನ್ವಿ, ರಾಜು ಹುಬ್ಬಳ್ಳಿ, ಬಸವರಾಜ ನಾಯ್ಕ, ರಾಜು ಹಿರೇಹೊಳಿ, ಸುಭಾಸ ರಡರಟ್ಟಿ, ಸುನೀಲ ಮೇತ್ರಿ, ಸತ್ಯೆಪ್ಪ ಬಸಲಿಂಗಪ್ಪಗೋಳ, ಚೇತನ ಕರೋನಿ, ಸಂಜು ಪಾರ್ಶಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ