ಆ್ಯಪ್ನಗರ

ಶಿವಮೊಗ್ಗ-ರಾಣೆಬೆನ್ನೂರು, ಬೆಳಗಾವಿ-ಧಾರವಾಡ ರೈಲು ಮಾರ್ಗ ಶೀಘ್ರ

ಬೆಳಗಾವಿ: ಶಿವಮೊಗ್ಗ-ರಾಣೆಬೆನ್ನೂರು ಮತ್ತು ಬೆಳಗಾವಿ-ಧಾರವಾಡ ...

Vijaya Karnataka 9 Aug 2020, 5:00 am
ಬೆಳಗಾವಿ: ಶಿವಮೊಗ್ಗ-ರಾಣೆಬೆನ್ನೂರು ಮತ್ತು ಬೆಳಗಾವಿ-ಧಾರವಾಡ ಯೋಜನೆ ಗಳನ್ನು ಮುಂದಿನ ರೈಲ್ವೆ ಬಜೆಟ್‌ನಲ್ಲಿಅಳವಡಿಸಿಕೊಂಡು ಆದಷ್ಟು ಬೇಗ ಕಾಮಗಾರಿ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಹೇಳಿದ್ದಾರೆ.
Vijaya Karnataka Web 8LBS3_53
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿಬೆಳಗಾವಿನಗರದ ತಮ್ಮ ಕಚೇರಿಯಿಂದಲೇ ಶನಿವಾರ ವರ್ಚುವಲ್‌ ವೇದಿಕೆಯ ಮೂಲಕ ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ಲಿಫ್ಟ್‌, ಅರಸಾಳು ನಿಲ್ದಾಣದಲ್ಲಿಮೂಲ ಸೌಕರ್ಯಗಳು, ಸ್ಟೇಷನ್‌ ಬಿಲ್ಡಿಂಗ್‌ ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್‌ಫಾಮ್‌ರ್‍ಗಳನ್ನು ಉದ್ಘಾಟಿಸಿದರು.


ನಗರದ ತಮ್ಮ ಕಚೇರಿಯಿಂದಲೇ ಶನಿವಾರ ವರ್ಚುವಲ್‌ ವೇದಿಕೆಯ ಮೂಲಕ ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿಲಿಫ್ಟ್‌, ಅರಸಾಳು ನಿಲ್ದಾಣದಲ್ಲಿಮೂಲ ಸೌಕರ್ಯಗಳು, ಸ್ಟೇಷನ್‌ ಬಿಲ್ಡಿಂಗ್‌ ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್‌ಫಾಮ್‌ರ್‍ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.''994 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ-ರಾಣೆಬೆನ್ನೂರು ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯ ಮಂತ್ರಿಗಳು ಉಚಿತ ಭೂಮಿ ಒದಗಿಸು ವುದರ ಜತೆಗೆ ರಾಜ್ಯ ಸರಕಾರದ ವತಿಯಿಂದ ಶೇ.50 ರಷ್ಟು ಯೋಜನಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ದಾವಣಗೆರೆ-ಬೆಂಗಳೂರು ನಡುವೆ ಡಬಲ್‌ ಲೇನ್‌ ನಿರ್ಮಾಣಕ್ಕೂ ಜಮೀನು ಒದಗಿಸುವುದಾಗಿ ತಿಳಿಸಿದ್ದಾರೆ.

ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮವನ್ನು ಇಲಾಖೆ ವತಿಯಿಂದ ಕೈಗೊಳ್ಳಲಾಗುವುದು'', ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ''ಶಿವಮೊಗ್ಗ ಜಿಲ್ಲೆಯ ರೈಲ್ವೆ ಜಾಲ ವಿಸ್ತರಣೆ, ರೈಲುಗಳ ಸಂಖ್ಯೆ ಹೆಚ್ಚಳ ಹಾಗೂ ನಿಲ್ದಾಣಗಳಲ್ಲಿಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಆದ್ಯತೆಯ ಮೇರೆಗೆ ಆಗಬೇಕು'', ಎಂದು ಕೋರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ