ಆ್ಯಪ್ನಗರ

ಡಿ.3ರಂದು 220ನೇ ಶಿವಾನುಭವ ಗೋಷ್ಠಿ

ಇಲ್ಲಿಯ ಶಿವಬಸವ ನಗರದ ಕಾರಂಜಿ ಮಠದ ಶಿವಾನುಭವ ಮಂಟಪದಲ್ಲಿ ಡಿ3 ರಂದು ಸಂಜೆ 6ಕ್ಕೆ 220ನೇ ಶಿವಾನುಭವ ಗೋಷ್ಠಿ ನಡೆಯಲಿದೆ...

Vijaya Karnataka Web 29 Nov 2018, 5:00 am
ಬೆಳಗಾವಿ: ಇಲ್ಲಿಯ ಶಿವಬಸವ ನಗರದ ಕಾರಂಜಿ ಮಠದ ಶಿವಾನುಭವ ಮಂಟಪದಲ್ಲಿ ಡಿ.3 ರಂದು ಸಂಜೆ 6ಕ್ಕೆ 220ನೇ ಶಿವಾನುಭವ ಗೋಷ್ಠಿ ನಡೆಯಲಿದೆ.
Vijaya Karnataka Web shivanubhava goshthi on dec 3
ಡಿ.3ರಂದು 220ನೇ ಶಿವಾನುಭವ ಗೋಷ್ಠಿ


ಇದೇ ವೇಳೆ ತ್ರಿವಿಧ ದಾಸೋಹಮೂರ್ತಿ ನಾಗನೂರು ರುದ್ರಾಕ್ಷಿಮಠದ ಡಾ. ಶಿವಬಸವ ಸ್ವಾಮಿಗಳ 129ನೇ ಜಯಂತಿ ಹಾಗೂ ಸನ್ಮಾನ ಸಮಾರಂಭ ನಡೆಯುವುದು. ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಬೆಳಗಾವಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಶಿಭೂಷಣ ಪಾಟೀಲ ಅಧ್ಯಕ್ಷ ತೆ ವಹಿಸುವರು.

ನಾಗನೂರು ಶಿವಬಸವ ಸ್ವಾಮಿಗಳ ಸಮಾಜಸೇವೆ ಕುರಿತು ಶೇಗುಣಸಿ ವಿರಕ್ತಮಟದ ಶ್ರೀ ಮಹಾಂತ ದೇವರು ಉಪನ್ಯಾಸ ನೀಡುವರು. ಶ್ರೀ ಶಿವಯೋಗಿ ದೇವರು ಸಮ್ಮುಖ ವಹಿಸುವರು. ಇದೇ ಸಂದರ್ಭದಲ್ಲಿ ಬೆಂಗಳೂರು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ 'ರಮಣಶ್ರೀ ಶರಣ' ಉತ್ತೇಜನ ಪ್ರಶಸ್ತಿ ಪುರಸ್ಕೃತ ಪ್ರಕಾಶ ಗಿರಿಮಲ್ಲನವರನ್ನು ಸನ್ಮಾನಿಸಲಾಗುವುದು. ಕಾರಂಜಿಮಠದ ಮಾತೃ ಮಂಡಳಿವರಿಂದ ಸಾಮೂಹಿಕ ಪ್ರಾರ್ಥನೆ ನಡೆಯುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ