ಆ್ಯಪ್ನಗರ

ಸ್ಮಶಾನ ಸ್ವಚ್ಛಗೊಳಿಸಿ ಶಿವರಾತ್ರಿ ಆಚರಣೆ

ಖಾನಾಪುರ: ಸ್ಥಳೀಯ ನಿಂಗಾಪುರ ಗಲ್ಲಿಯ ಚವಾಟಾ ಯುವಕ ಮಂಡಳದ ಸದಸ್ಯರು ಸೋಮವಾರ ಪಟ್ಟಣ ಪಂಚಾಯಿತಿ ಸದಸ್ಯ ವಿನಾಯಕ ಕಲಾಲ ನೇತೃತ್ವದಲ್ಲಿ ಶಿವನ ವಾಸಸ್ಥಾನವಾದ ...

Vijaya Karnataka 5 Mar 2019, 5:00 am
ಖಾನಾಪುರ : ಸ್ಥಳೀಯ ನಿಂಗಾಪುರ ಗಲ್ಲಿಯ ಚವಾಟಾ ಯುವಕ ಮಂಡಳದ ಸದಸ್ಯರು ಸೋಮವಾರ ಪಟ್ಟಣ ಪಂಚಾಯಿತಿ ಸದಸ್ಯ ವಿನಾಯಕ ಕಲಾಲ ನೇತೃತ್ವದಲ್ಲಿ ಶಿವನ ವಾಸಸ್ಥಾನವಾದ ಸ್ಮಶಾನವನ್ನು ಸ್ವಚ್ಛಗೊಳಿಸುವ ಮೂಲಕ ಮಹಾಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಿದರು.
Vijaya Karnataka Web BEL-4KHANAPUR4


ಪಟ್ಟಣದ ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಲಪ್ರಭಾ ನದಿ ತೀರದಲ್ಲಿರುವ ಸ್ಮಶಾನಕ್ಕೆ ತೆರಳಿದ ಯುವಕರು ಸ್ಮಶಾನದ ಸುತ್ತಮುತ್ತಲಿನ ಪ್ರದೇಶ ಮತ್ತು ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಸ್ವಚ್ಛಗೊಳಿಸಿದರು. ಬಟ್ಟೆ, ಕಟ್ಟಿಗೆ, ಬೂದಿ ಮತ್ತು ಕಸಕಡ್ಡಿಗಳಿಂದ ಕೂಡಿದ್ದ ಶವ ದಹನ ಕೊಠಡಿಯನ್ನು ಶುಚಿಗೊಳಿಸಿ ನೀರಿನಿಂದ ತೊಳೆದರು. ಇಡೀ ಸ್ಮಶಾನವನ್ನು ಕಸದಿಂದ ಮುಕ್ತಗೊಳಿಸಿದರು.

''ಚವಾಟಾ ಯುವಕ ಮಂಡಳದ 20 ಸದಸ್ಯರು ಬೆಳಗ್ಗೆ ಎರಡು ಗಂಟೆಗಳ ಕಾಲ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಮುಂಬರುವ ದಿನಗಳಲ್ಲಿ ಮುಕ್ತಿ ವಾಹನ, ಸ್ಮಶಾನ ಗೋಡೆಗಳು ಮತ್ತು ಕಟ್ಟಡ ದುರಸ್ತಿ, ಸುಣ್ಣಬಣ್ಣ ಹಚ್ಚುವ, ಸ್ಮಶಾನದಲ್ಲಿ ಬೆಂಚ್‌ಗಳನ್ನು ಅಳವಡಿಸುವ ಉದ್ದೇಶವನ್ನು ಹೊಂದಲಾಗಿದೆ. ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸುವ ಮೂಲಕ ಶೀಘ್ರದಲ್ಲಿ ಈ ಕೆಲಸ ಕೈಗೊಳ್ಳಲಾಗುವುದು'' ಎಂದು ವಿನಾಯಕ ಕಲಾಲ ಹೇಳಿದರು.

''ಶಿವರಾತ್ರಿ ಪ್ರಯುಕ್ತ ಎಲ್ಲೆಡೆ ಶಿವಮಂದಿರಗಳಲ್ಲಿ ಶಿವನ ಆರಾಧನೆ, ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರೆ, ಪಟ್ಟಣದ ಯುವಕರು ಸ್ಮಶಾನ ಸ್ವಚ್ಛಗೊಳಿಸುವ ಮೂಲಕ ಅರ್ಥಪೂರ್ಣವಾಗಿ ಶಿವನ ಆರಾಧನೆ ಮಾಡಿದ್ದಾರೆ'', ಎಂದು ತಹಸೀಲ್ದಾರ ಶಿವಾನಂದ ಉಳ್ಳೇಗಡ್ಡಿ ಶ್ಲಾಘಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ