ಆ್ಯಪ್ನಗರ

ಗೋವಾ ಸಕ್ಕರೆ ಕಾರ್ಖಾನೆಗೆ ರಾಜ್ಯದ ರೈತರ ಮುತ್ತಿಗೆ

ಪಣಜಿ: ಕಬ್ಬಿನ ಬಾಕಿ ಬಿಲ್‌ ನೀಡುವಂತೆ ಒತ್ತಾಯಿಸಿ ಕರ್ನಾಟಕದ ...

Vijaya Karnataka 27 Nov 2019, 5:00 am
ಪಣಜಿ: ಕಬ್ಬಿನ ಬಾಕಿ ಬಿಲ್‌ ನೀಡುವಂತೆ ಒತ್ತಾಯಿಸಿ ಕರ್ನಾಟಕದ ಕಬ್ಬು ಬೆಳೆಗಾರರು ಮಂಗಳವಾರ ಇಲ್ಲಿನ ಸಂಜೀವಿನಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
Vijaya Karnataka Web 26GOA3_53
ಗೋವಾದ ಸಂಜೀವಿನಿ ಸಕ್ಕರೆ ಕಾರ್ಖಾನೆ ಎದುರು ಕರ್ನಾಟಕದ ಕಬ್ಬು ಬೆಳೆಗಾರರು ಪ್ರತಿಭಟಿಸಿದರು.


ಸಂಜೀವಿನಿ ಸಕ್ಕರೆ ಕಾರ್ಖಾನೆ ಈ ವರ್ಷ ಇನ್ನೂ ಹಂಗಾಮು ಆರಂಭಿಸಿಲ್ಲ. ಹೀಗಾಗಿ ಗೋವಾದಲ್ಲಿಬೆಳೆದ ಕಬ್ಬನ್ನು ಕರ್ನಾಟಕದ ಕಾರ್ಖಾನೆಗಳಿಗೆ ಸಾಗಿಸಲು ಗೋವಾ ಸರಕಾರ ಒಪ್ಪಿಗೆ ನೀಡಿದೆ. ಆದರೆ, ಹಿಂದಿನ ವರ್ಷ ಸಂಜೀವಿನಿ ಕಾರ್ಖಾನೆಗೆ ಕಬ್ಬು ಪೂರೈಸಿದ ಕರ್ನಾಟಕದ ರೈತರಿಗೆ ಬಾಕಿ ಬಿಲ್‌ ಪಾವತಿಸದೇ ಇದ್ದರೆ ಗೋವಾದಿಂದ ಕರ್ನಾಟಕಕ್ಕೆ ಆಗಮಿಸುವ ಕಬ್ಬಿನ ಲಾರಿಗಳನ್ನು ತಡೆದು ಪ್ರತಿಭಟಿಸಲಾಗುವುದು ಎಂದು ಪ್ರತಿಭಟನೆ ನಿರತ ರೈತರು ಎಚ್ಚರಿಸಿದರು.

ಕಳೆದ ವರ್ಷ ಸಂಜೀವಿನಿ ಸಕ್ಕರೆ ಕಾರ್ಖಾನೆಗೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ರೈತರು ಸುಮಾರು 17,000 ಟನ್‌ ಕಬ್ಬು ಪೂರೈಸಿದ್ದಾರೆ. ಒಂದು ಟನ್‌ ಕಬ್ಬಿಗೆ 3,100 ರೂ. ದರ ನೀಡುವುದಾಗಿ ಕಾರ್ಖಾನೆಯವರು ಹೇಳಿದ್ದರು. ಅಂದರೆ, ಟನ್‌ಗೆ ಕೇವಲ 1,500 ರೂ. ಮಾತ್ರ ಪಾವತಿಸಲಾಗಿದೆ. ಬಾಕಿ ಹಣವನ್ನೂ ಇನ್ನೂ ಪಾವತಿಸಿಲ್ಲ.ಕಬ್ಬಿನ ಬಾಕಿ ಹಣವನ್ನು ಡಿಸೆಂಬರ್‌ 1ರ ಒಳಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ