ಆ್ಯಪ್ನಗರ

ನೀರಿಗಾಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ

ಐಗಳಿ: ಗ್ರಾಮದ ಜಲನಗರದಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ...

Vijaya Karnataka 6 May 2019, 5:00 am
ಐಗಳಿ : ಗ್ರಾಮದ ಜಲನಗರದಲ್ಲಿ ಸಮರ್ಪಕವಾಗಿ ನೀರು ಪೂರೈಸುವಂತೆ ಆಗ್ರಹಿಸಿ ಜನರು ಖಾಲಿ ಕೊಡಗಳೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
Vijaya Karnataka Web BEL-5 AIGALI 1(2)


ಜಲನಗರದಲ್ಲಿ ಸುಮಾರು 1ಸಾವಿರಕ್ಕಿಂತ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇಲ್ಲಿನ ಎಲ್ಲ ಜನ ಕೂಲಿಕಾರರೇ ಆಗಿದ್ದು ಪ್ರತಿದಿನ ಬೆಳಗ್ಗೆ ಕೆಲಸಕ್ಕಾಗಿ ಹೊರಗೆ ಹೋಗಬೇಕು. ಆದರೆ ನೀರಿನ ಅಭಾವದಿಂದಾಗಿ ಕೆಲಸ ಬಿಟ್ಟು ನೀರು ತರಲು ಹೋಗಬೇಕಾಗಿದೆ. ಗ್ರಾಮದಿಂದ 1 ಕಿಮೀ ಸಮೀಪ ಎಲ್ಲಿಯೂ ನೀರಿಲ್ಲ. ನೀರಿಗಾಗಿ ಎಲ್ಲೆಡೆ ಅಲೆದಾಡುವಂತಾಗಿದೆ. ಹಗಲು ರಾತ್ರಿ ನೀರಿಗಾಗಿ ದೂರದಲ್ಲಿನ ಬೋರ್‌ವೆಲ್‌ ಮುಂದೆ ನಿಲ್ಲುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಳು ಚುನಾವಣೆ ಸಂದರ್ಭಗಳಲ್ಲಿ ಮತ ಕೇಳಲು ಮಾತ್ರ ಬರುತ್ತಾರೆ. ನಂತರ ನಮ್ಮ ಸಮಸ್ಯೆಯನ್ನು ಯಾರೊಬ್ಬರೂ ಕೇಳುವುದಿಲ್ಲ. ಜಲನಗರದಲ್ಲಿ ಕಳೆದ 20 ವರ್ಷಗಳಿಂದ ವಾಸಿಸುತ್ತಿದ್ದು, ನಮಗೆ ರಸ್ತೆ, ನೀರು ಮತ್ತಿತರ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ನಿವಾಸಿಗಳು ಎಚ್ಚರಿಸಿದರು.

ದಾನಪ್ಪ ಮಾದರ, ಯಲ್ಲಪ್ಪ ಮಾದರ, ಸಿದ್ದು ಗಂಟಿ, ಪರಶುರಾಮ ಮಾದರ, ಅಪ್ಪಾಸಾಬ ಕರಾಬಿ, ಅಪ್ಪಾಸಾಬ ಮಾದರ, ಮಹೇಶ ಮಾದರ, ಸುಭಾಷ ಐಹೊಳೆ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ