ಬೆಳಗಾವಿ: ಜೋಗ ಜಲಪಾತ ವೀಕ್ಷ ಣೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಜು. 27ರಿಂದ ಆ. 25ರವರೆಗೆ ಪ್ರತಿ ಭಾನುವಾರ ಮತ್ತು ಇತರೆ ಸಾರ್ವತ್ರಿಕ ರಜೆ ದಿನಗಳಂದು ಕೇಂದ್ರ ಬಸ್ ನಿಲ್ದಾಣದಿಂದ ವೇಗದೂತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಪ್ರಯಾಣಿಕರಿಗೆ ಎರಡು ಬದಿಗೆ 500 ರೂ. ದರ ನಿಗದಿಪಡಿಸಲಾಗಿದೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ 7 ಗಂಟೆಗೆ ಹೊರಟು ಮಧ್ಯಾಹ್ನ 12.30ಕ್ಕೆ ಜೋಗ ಜಲಪಾತ ತಲಪುವುದು. ನಂತರ 3.30 ಗಂಟೆವರೆಗೆ ಜಲಪಾತ ವೀಕ್ಷ ಣೆ ಅವಕಾಶ ನೀಡಲಾಗುವು. ಸಂಜೆ 4 ಗಂಟೆಗೆ ಜೋಗ ಜಲಪಾತದಿಂದ ನಿರ್ಗಮಿಸಿ ರಾತ್ರಿ 9 ಗಂಟೆಗೆ ಬೆಳಗಾವಿ ತಲಪುವುದು. ಹೆಚ್ಚಿನ ಮಾಹಿತಿಗಾಗಿ ಮೊ.7760991612, 7760991613, 7760991625 ಸಂಪರ್ಕಿಸಬಹುದು ಎಂದು ಬೆಳಗಾವಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ
ಜೋಗ ಜಲಪಾತ ವೀಕ್ಷ ಣೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಜು 27ರಿಂದ ಆ...
Vijaya Karnataka 26 Jul 2019, 5:00 am