ಆ್ಯಪ್ನಗರ

14ರಂದು ರಾಜ್ಯ ಮಟ್ಟದ ಮಹಿಳಾ ಸಂತ ಸಮಾಗಮ

ಅಥಣಿ: ಸಂತ ನಿರಂಕಾರಿ ಮಂಡಳದ ವತಿಯಿಂದ ಜು...

Vijaya Karnataka 12 Jul 2019, 5:00 am
ಅಥಣಿ : ಸಂತ ನಿರಂಕಾರಿ ಮಂಡಳದ ವತಿಯಿಂದ ಜು.14ರಂದು ಮೋಟಗಿ ಮಠದ ಅನುಭವ ಮಂಟಪದಲ್ಲಿ ವಲಯ ಮಟ್ಟದ ಮಹಿಳಾ ಸಂತ ಸಮಾಗಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಿರಂಕಾರಿ ಮಂಡಳದ ಅಥಣಿ-ವಿಜಯಪುರ ವಲಯ ಸಂಯೋಜಕ ರಾಜೇಂದ್ರ ಸಾತಪುತೆ ತಿಳಿಸಿದರು.
Vijaya Karnataka Web BEL-11 ATHANI-02


ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 17 ವರ್ಷಗಳಿಂದ ಸಂತ ನಿರಂಕಾರಿ ಮಂಡಳದ ವತಿಯಿಂದ ಸತ್ಸಂಗ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದು ಇದು ಮಂಡಳದ ವತಿಯಿಂದ ಅಥಣಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮೊದಲ ಕಾರ್ಯಕ್ರಮವಾಗಿದೆ. ಧರ್ಮ ಪ್ರಚಾರಾರ್ಥ ಗುಜರಾತಿನ ವಿದ್ಯಾ ತಾಯಿ ಅವರು ಅಥಣಿಗೆ ಆಗಮಿಸಲಿದ್ದಾರೆ ಎಂದರು.

ಸಮಾವೇಶಕ್ಕೆ ಬೆಳಗಾವಿ, ಉಡುಪಿ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಿಂದ ಹಾಗೂ ಮಹಾರಾಷ್ಟ್ರದಿಂದ ಸುಮಾರು 5000 ಭಕ್ತರು ಆಗಮಿಸುವ ಸಾಧ್ಯತೆ ಇದೆ. ಸಮಾವೇಶದಲ್ಲಿ ನಿರಂಕಾರಿ ಸದ್ಗುರು ಮಾತಾ ಸುದೀಕ್ಷಾಜಿ ವಿಚಾರ ವಿನಿಮಯ ಕೈಗೊಳ್ಳಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪುರಸಭೆಯ ಮಾಜಿ ಅಧ್ಯಕ್ಷ ರಾವಸಾಬ ಐಹೊಳೆ , ವಲಯ ಮಹಿಳಾ ಘಟಕದ ಪ್ರಮುಖರಾದ ಕಾವೇರಿ ಮಾನೆ, ಮಂಡಳದ ಮುಖಂಡರಾದ ಭೀಮರಾವ ಪ್ರಭಾಕರ, ರೂಪೇಶ ಯಳಮಲ್ಲಿ ಹಾಗೂ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ